ಮುಕ್ತಾಯ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

ಪೀಠಿಕೆ

ಮೈಸೂರು ಸಾಂಸ್ಕೃತಿಕ ನಗರಿ. ಸಂಸ್ಕೃತಿ ಶಿಕ್ಷಣದ ಮಗು. ಶಿಕ್ಷಣ ಸಂಸ್ಕೃತಿಯ ಪಾಲಕ. ಒಂದಕ್ಕೊಂದು ಜನ್ಯ ಜನಕ ಸಂಬಂಧ. ಮೈಸೂರು ಜಿಲ್ಲೆಯ  ಶೈಕ್ಷಣಿಕ ನಾಯಕತ್ವ ಆಡಳಿತ ಮತ್ತು ಅಭಿವೃದ್ಧಿಯೆಂಬ ಕವಲುದಾರಿಯ ಸಂಗಮವಾಗಿದೆ. ಇಲ್ಲಿ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವುದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ. ಪ್ರಸ್ತುತ ನಗರದ ಹೃದಯ ಭಾಗದಲ್ಲಿದೆ. ಅಂದಿನ ಬೇಸಿಗೆ ಅರಮನೆ ಇಂದಿನ ವಸಂತಮಹಲ್ ಹೆಸರಿನಲ್ಲೇ ಶೈಕ್ಷಣಿಕ ರಂಗಭೂಮಿಯಾಗಿದೆ. ಎಲ್ಲಾ ಡಯಟ್ ಗಳಂತೆಯೇ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿ.ಎಸ್..ಆರ್.ಟಿ.) ನಿರ್ದೇಶನಗಳನ್ವಯ ರಾಜ್ಯದ ಎಲ್ಲಾ ಡಯಟ್ ಗಳು ಕಾರ್ಯೋನ್ಮುಖವಾಗಿವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವ ವಿದ್ವತ್ಪೂರ್ಣ ಕಾರ್ಯಗಳಲ್ಲಿ ತೊಡಗಿದೆ. ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶೈಕ್ಷಣಿಕ ನಾಯಕತ್ವ, ವಿಜ್ಞಾನ ಕಾರ್ಯಕ್ರಮಗಳ ಉತ್ತೇಜನ, ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಾಲಾ ಶಿಕ್ಷಣದಲ್ಲಿ ಪಾಂಡಿತ್ಯಪೂರ್ಣ ನಾಯಕತ್ವವನ್ನು ಬೆಳೆಸುವ ಗುರಿಯೊಂದಿಗೆ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಅಗತ್ಯ ತರಬೇತಿಗಳನ್ನು ನೀಡುತ್ತಾ ಅವರನ್ನು ವೃತ್ತಿಪರರನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಜೊತೆಗೆ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಬೇಕಾದ ಬೆಂಬಲವನ್ನು ನೀಡುವ ದಿಸೆಯಲ್ಲಿ ಪ್ರತಿ ವರ್ಷವೂ ಶೈಕ್ಷಣಿಕ ಸಂಶೋಧನಾ ಅಧ್ಯಯನಗಳನ್ನು ನಡೆಸುತ್ತಾ, ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿದೆ.

I. ಡಯಟ್ ಗಳ ಸಂರಚನೆ:

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಶ್ರೇಣಿಯ ಅಧಿಕಾರಿಗಳು ಡಯಟ್ ಗಳ ಮುಖ್ಯಸ್ಥರಾಗಿರುತ್ತಾರೆ. ಶಿಕ್ಷಣಾಧಿಕಾರಿಗಳ ಶ್ರೇಣಿಯ ಅಧಿಕಾರಿಯು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಲ್ಲಿ ಉಪನಿರ್ದೇಶಕರಿಗೆ ನೆರವು ನೀಡುತ್ತಾರೆ. ಇದಲ್ಲದೆ ಪ್ರತಿ ಡಯಟ್ ಗಳಲ್ಲಿ ಏಳು ವಿಭಾಗಗಳಿಗೂ ಕ್ಷೇತ್ರಶಿ ಕ್ಷಣಾಧಿಕಾರಿಗಳ ಶ್ರೇಣಿಯ ಏಳು ಮಂದಿ ಅಧಿಕಾರಿಗಳು ಮತ್ತು ಮುಖ್ಯಶಿಕ್ಷಕರ ಗ್ರೂಪ್ ‘ಬಿ’ಶ್ರೇಣಿಯ 21 ಅಧಿಕಾರಿಗಳು ತಮ್ಮ ಸಿಬ್ಬಂದಿಯೊಡಗೂಡಿ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯಗಳು, ಸರ್ಕಾರಿ ಶಿಕ್ಷಣ ತರಬೇತಿ ಸಂಸ್ಥೆಗಳು ಮತ್ತು ಅನುದಾನಿತ ಡಿ.ಎಲ್.ಇಡಿ ಕಾಲೇಜುಗಳು ಡಿ.ಎಸ್..ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ. www.dsert.kar.nic.in ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ.

II. ಡಯಟ್ ನ ಧ್ಯೇಯ ಮತ್ತು ಪ್ರಮುಖ ಚಟುವಟಿಕೆಗಳು :

  1. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವುದು.
  2. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತಗಳೆರಡೂ ಒಳಗೊಂಡಂತೆ ಶಿಕ್ಷಕರ ಶಿಕ್ಷಣ ತರಬೇತಿಯ ನಿರ್ವಹಣೆ (ಸೇವಾ ಪೂರ್ವ ಮತ್ತು ಸೇವಾನಿರತ ಶಿಕ್ಷಣ). 
  3. ಪ್ರೌಢ ಶಾಲಾ ಶಿಕ್ಷಕರ ಬೋಧನಾ ಅಗತ್ಯತೆಗಳನ್ನು ಗುರುತಿಸಿ, ಶಿಕ್ಷಕರ ಬೋಧನಾ ಕೌಶಲ್ಯಗಳನ್ನು ವೃದ್ಧಿಸುವುದು.
  4. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಹೆಚ್ಚಿಸುವುದು.
  5. ಸೇವಾ ಪೂರ್ವ ಮತ್ತು ಸೇವಾನಿರತ ಶಿಕ್ಷಣ (ಡಿ.ಎಲ್.ಇ.ಡಿ) ತರಬೇತಿ ಸಂಸ್ಥೆಗಳ ನಿರ್ವಹಣೆ & ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದು.
  6. ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮತ್ತು ತಂತ್ರಜ್ಞಾನ ಆಧರಿತ ಬೋಧನಾ ವಿಧಾನದ  ಮೂಲಕಗುಣಮಟ್ಟ ವೃದ್ಧಿಸುವುದು.
  7. ಪ್ರೌಢ ಶಾಲಾ ವಿದ್ಯಾರ್ಥಿ / ಶಿಕ್ಷಕರಿಗೆ ಕಲೆಯ ಅನ್ವಯಗಳು, ಹೊಸ ಆವಿಷ್ಕಾರ, ಕ್ರಿಯಾ ಸಂಶೋಧನೆ ಕುರಿತು ಮಾರ್ಗದರ್ಶನ / ಗೋಷ್ಠಿಗಳನ್ನು ಆಯೋಜಿಸುವುದು.
  8. ಪಠ್ಯ ವಿಷಯ, ಶಿಕ್ಷಣಶಾಸ್ತ್ರ, ಶಿಕ್ಷಣದಲ್ಲಿ ರಂಗ ಕಲೆಯಂತಹ ನವೀನ ಪದ್ಧತಿಗಳ ಅಳವಡಿಕೆ, ರಾಜ್ಯದಲ್ಲಿ ಕಡಿಮೆ ವೆಚ್ಚದವೆಚ್ಚರಹಿತ ಬೋಧನಾ ಕಲಿಕಾ ಸಾಮಗ್ರಿಗಳ ತಯಾರಿಕೆ ಮುಂತಾದ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವುದು.
  9. ಎನ್.ಟಿ.ಎಸ್.ಇ ಮತ್ತು ಎನ್.ಎಂ.ಎಂ.ಎಸ್ ಪರೀಕ್ಷೆಗಳನ್ನು ನಡೆಸುವುದು.
  10. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶನದಂತೆ   ಕಾರ್ಯನಿರ್ವಹಣೆ ಮಾಡುವುದು.

III. ಇಲಾಖೆಯ ಅಂಗ ರಚನೆ :

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಶ್ರೇಣಿಯ ಅಧಿಕಾರಿಯು ಡಯಟ್ ನ ಮುಖ್ಯಸ್ಥರಾಗಿರುತ್ತಾರೆ. ಶಿಕ್ಷಣಾಧಿಕಾರಿಗಳ ಶ್ರೇಣಿಯ ಅಧಿಕಾರಿಯು ಎಲ್ಲಾ ವಿಭಾಗಗಳ ಮುಖ್ಯಸ್ಥರಾಗಿದ್ದು, ಮುಖ್ಯಶಿಕ್ಷಕರು/ತತ್ಸಮಾನನ ಗ್ರೂಪ್ ‘ಬಿ’ವೃಂದದ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಡಗೂಡಿ ಕಾರ್ಯ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಡಿ.ಎಸ್..ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ

http://dietmysuru.com ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ. 

ಡಯಟ್ ನ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರಗಳು

ಕ್ರ.ಸಂ

ಸಿಬ್ಬಂದಿಯ ವರ್ಗ

ಮಂಜೂರಾದ ಹುದ್ದೆಗಳ ಹೆಸರು

ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ

ಭರ್ತಿ ಮಾಡಲ್ಪಟ್ಟ ಹುದ್ದೆಗಳ ಸಂಖ್ಯೆ

ಕಾಲಂ 6ರಲ್ಲಿನ ಒಟ್ಟು ಭರ್ತಿ ಮಾಡಲ್ಪಟ್ಟ ಹುದ್ದೆಗಳಲ್ಲಿ

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ

ಪುರುಷರು

ಸ್ತ್ರೀಯರು

ಒಟ್ಟು

ಪರಿಶಿಷ್ಟ ಜಾತಿಯವರ ಸಂಖ್ಯೆ

ಪರಿಶಿಷ್ಟ ಪಂಗಡದವರ ಸಂಖ್ಯೆ

1

2

 

3

4

5

6

7

8

9

IV. ಡಯಟ್ ನ ವಿಭಾಗಗಳು

    • ಸೇವಾ ಪೂರ್ವ ಶಿಕ್ಷಣ  (PSTE WING)
      1. ಡಿ.ಎಲ್.ಇ.ಡಿ ಕಾಲೇಜುಗಳ ಸಮಾಲೋಚನಾ ಸಭೆ
      2. TET ಪರೀಕ್ಷೆ ಸಿದ್ಧತೆ, ಪ್ರಶ್ನೆಪತ್ರಿಕೆ ರಚನೆ
      3. NIOS ಮೇಲ್ವಿಚಾರಣೆ
    • ಜಿಲ್ಲಾ ಸಂಪನ್ಮೂಲ ಘಟಕ (DRU WING)
      1. ಶಿಕ್ಷಕರ ಶಿಕ್ಷಣ (TE)
      2. ವಿಜ್ಞಾನ ನಾಟಕ ಸ್ಪರ್ಧೆ 
      3. ವಿಜ್ಞಾನ ವಿಚಾರ ಸಂಕಿರಣ, ವಸ್ತುಪ್ರದರ್ಶನ 
      4. ಪ್ರೇರಣಾ ತರಬೇತಿಗಳು
      5. ಪಠ್ಯಪುಸ್ತಕ
    • ಶಿಕ್ಷಣ ತಂತ್ರಜ್ಞಾನ ಕೋಶ (ET WING)
      1. ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ (TALP)
        1. IT@Schools in Karnataka
        2. Student ICT E-contant 
        3. ಖಾನ್ ಅಕಾಡೆಮಿ ಸಂಪನ್ಮೂಲಗಳ ಭಾವಾನುವಾದ
      2. ರೇಡಿಯೋ ಕಾರ್ಯಕ್ರಮ
      3. ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು  
      4. GPSTR ಮೌಲ್ಯಮಾಪನ   
      5. ಟೆಲಿ ಶಿಕ್ಷಣ ಕಾರ್ಯಕ್ರಮ 
      6. ಎಜುಸ್ಯಾಟ್ ಕಾರ್ಯಕ್ರಮ 
      7. ವಿಡಿಯೋ ಕಾನ್ಫರೆನ್ಸ್ / ಟೆಲಿ ಕಾನ್ಫರೆನ್ಸ್ ನಿರ್ವಹಣೆ 
    • IFIC WING
      1. ಓದು ಕರ್ನಾಟಕ
      2. ಗಣಿತ ಕಲಿಕಾಂದೋಲನ
      3. ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ (NPEP)
      4. STIR ಕಾರ್ಯಕ್ರಮ 
    • ಸರ್ವ ಶಿಕ್ಷಣ ಅಭಿಯಾನ (SSA) & ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (RMSA)
      1. ಗುರು ಚೇತನ
      2. ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE), ಮತ್ತು ನ್ಯಾಷನಲ್ ಮೀನ್ಸ್ ಕಮ್ ಮೆರಿಟ್(NMMS)
      3. ಎಸ್.ಡಿ.ಎಂ.ಸಿ ತರಬೇತಿಗಳು 
    • ಭಾಷಾ ವಿಭಾಗ
      1. ELTC 
        1. ಇಂಗ್ಲೀಷ್ ಭಾಷೆ ಅಭಿವೃದ್ಧಿ ಯೋಜನೆ (ELEP)