ಮುಕ್ತಾಯ

ಜಿಲ್ಲಾಧಿಕಾರಿಗಳ ಕಾರ್ಯಾಲಯ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯು ಜಿಲ್ಲಾ ಆಡಳಿತದ ಮುಖ್ಯಸ್ಥನಾಗಿದ್ದು, ಹೆಚ್ಚಿನ ಕಾನೂನಾತ್ಮಕ ಅಧಿಕಾರ ಉಳ್ಳವರಾಗಿರುತ್ತಾರೆ. ಕೇವಲ ಕಂದಾಯ ಇಲಾಖೆಯಲ್ಲದೇ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಆಡಳಿತವು ಸೇರಿದೆ.

ಜಿಲ್ಲಾ ಆಡಳಿತದ ಕಾರ್ಯಗಳು ಈ ಕೆಳಕಂಡಂತೆ ಇರುತ್ತದೆ:

    1. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಆಡಳಿತಾಧಿಕಾರಿ ವಿಷಯಗಳು: ಸಾರ್ವಜನಿಕರ ಸುರಕ್ಷತೆ ಹಾಗು ಶಾಂತಿಯನ್ನು ಕಾಪಾಡುವುದು ಅತಿ ಮುಖ್ಯವಾದ ಕರ್ತವ್ಯ. ಕಾನೂನು ಹಾಗು ಸುವ್ಯವಸ್ಥೆ ನಿರ್ವಹಣೆ ಮಾಡುವುದು ಪೊಲೀಸ್ ಅಧೀಕ್ಷಕರನ್ನೊಳಗೊಂಡಂತೆ ಜಂಟಿ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾಧಿಕಾರಿಯು ಜಿಲ್ಲೆಯ ದಂಡಾಧಿಕಾರಿಯು ಆಗಿರುತ್ತಾರೆ. ಜಿಲ್ಲೆಯಲ್ಲಿ ಕಾರಾಗೃಹಗಳ ಆಡಳಿತಕ್ಕಾಗಿ ಪ್ರತ್ಯೇಕ ಇಲಾಖೆ ಇದ್ದರು ಕೂಡ ಜಿಲ್ಲಾ ದಂಡಾಧಿಕಾರಿ ಜಿಲ್ಲೆಯಲ್ಲಿನ ಕಾರಾಗೃಹಗಳ ಮೇಲ್ವಿಚಾರಣೆ ನಡೆಸುತ್ತಾರೆ.
    2. ಭೂ ಕಂದಾಯ: ಎರಡನೇ ಅತಿ ಮುಖ್ಯವಾದ ಕರ್ತವ್ಯ ಭೂ ಕಂದಾಯಕ್ಕೆ ಸಂಬಂಧಪಟ್ಟಿದ್ದಾಗಿರುತ್ತದೆ. ಇದರಲ್ಲಿ ಭೂ ದಾಖಲೆಗಳನ್ನು ನಿರ್ವಹಣೆ ಮಾಡುವುದು ಅತಿ ಮುಖ್ಯವಾದ ಕರ್ತವ್ಯ. ಭೂಮಿಯನ್ನು ಮೌಲ್ಯ ಮಾಪನ ಮಾಡಿ ಭೂ ಕಂದಾಯವನ್ನು ನಿರ್ಧರಿಸಿ ವಸೂಲಾತಿ ಮಾಡುವುದು ಬಹು ಮುಖ್ಯವಾಗಿರುತ್ತದೆ. ಅಲ್ಲದೆ ಸಾರ್ವಜನಿಕರಿಂದ ಬಾಕಿ ಇರುವ ಭೂ ಕಂದಾಯ ವಸೂಲಾತಿಯು ಇದರಲ್ಲಿ ಸೇರಿರುತ್ತದೆ. ಜಿಲ್ಲಾಧಿಕಾರಿಯು ಭೂಮಿಯ ದಾಖಲಾತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ನಿರ್ವಹಿಸುವ ಸಂಬಂಧ ಗೊತ್ತುಪಡಿಸಿದ ಅಧಿಕಾರಿಯಾಗಿರುತ್ತಾರೆ. ಇತರೆ ಕಂದಾಯ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗು ಉಪ ತಹಶೀಲ್ದಾರ್ ರವರು ಕೂಡ ಭೂ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ಮೇಲ್ವಿಚಾರಣೆ ನಡೆಸುತ್ತಾರೆ.
    3. ಅಭಿವೃದ್ಧಿ ಚಟುವಟಿಕೆಗಳು:
      1. ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ, ಎನ್‍ಎಸ್‍ಎಪಿ, ಆದರ್ಶ ವಿವಾಹ, ಅಂತ್ಯ ಸಂಸ್ಕಾರ, ನಿರಾಶ್ರಿತರ ಪುನರ್ವಸತಿಯನ್ನು ವಿವಿಧ ಯೋಜನೆಗಳಡಿ ಕಂದಾಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.
      2. ಜಿಲ್ಲಾಧಿಕಾರಿಯು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿಯು ಜಿಲ್ಲೆಯ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ. ಯಾವುದೇ ವಿಪತ್ತನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಜಿಲ್ಲಾಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
      3. ಜಿಲ್ಲಾಧಿಕಾರಿಯು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುತ್ತಾರೆ. ಇತರೆ ಜವಾಬ್ದಾರಿಗಳಲ್ಲಿ ಚುನಾವಣೆ ನಡೆಸುವುದು ಹಾಗು ಮತದಾರರ ಪಟ್ಟಿ ಪರಿಷ್ಕರಣೆಯು ಸೇರಿರುತ್ತದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ನಿಯಂತ್ರಣ ಹೊಂದಿದ್ದು, ಸಾರ್ವಜನಿಕರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ಪೂರೈಸುವುದು ಸೇರಿರುತ್ತದೆ.

    ಇತರ ಕಾರ್ಯಗಳು ಕೆಳಗಿನವುಗಳನ್ನು ಒಳಗೊಂಡಿವೆ:

    • ಚುನಾವಣೆಗಳು ಮತ್ತು ಚುನಾವಣಾ ನೋಂದಣಿ.
    • ಆಹಾರ ಮತ್ತು ನಾಗರಿಕ ನಿಯಂತ್ರಣ, ನಿಯಂತ್ರಣ ಮತ್ತು ವಿತರಣೆ
    • ಸರಬರಾಜು ಮತ್ತು ಅಗತ್ಯ ಸರಕುಗಳು.
    • ಅಬಕಾರಿ ಸಂಬಂಧಿಸಿದ ವಿಷಯಗಳು.
    • ಮುದ್ರಾಂಕ ಮತ್ತು ನೋಂದಣಿಗೆ ಸಂಬಂಧಿಸಿದ ವಿಷಯಗಳು.
    • ಪೌರಾಡಳಿತ ವಿಷಯಗಳು.
    • ಶಿಷ್ಟಾಚಾರ
    • ನೈಸರ್ಗಿಕ ವಿಕೋಪಗಳು ಮತ್ತು ಪರಿಹಾರ ಕ್ರಮಗಳು.
    • ವಿವಿಧ ಯೋಜನೆಗಳಲ್ಲಿ ಸ್ಥಳಾಂತರಿಸಿದ ವ್ಯಕ್ತಿಗಳ ಪುನರ್ವಸತಿ.
    • ಅರ್ಬನ್ ಲ್ಯಾಂಡ್ ಸೀಲಿಂಗ್ಗೆ ಸಂಬಂಧಿಸಿದ ವಿಷಯಗಳು
    • ಭೂ ಸ್ವಾಧೀನಕ್ಕೆ ಸಂಬಂಧಿಸಿದ ವಿಷಯಗಳು.
    • ಧಾರ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳು & ದತ್ತಿಲ್ಯಾಂಡ್ ಸುಧಾರಣೆಗಳು.
    • ಅರಣ್ಯಕ್ಕೆ ಸಂಬಂಧಿಸಿದ ವಿಷಯಗಳು.
    • ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಗಣತಿ
    • ಸಾರ್ವಜನಿಕ ಕುಂದುಕೊರತೆಗಳು.
    • ನೀರಾವರಿ ವಿಷಯಗಳು
    • ಜಿಲ್ಲಾಮಟ್ಟದಲ್ಲಿನ ಎಲ್ಲಾ ರಾಷ್ಟ್ರೀಯ ಉತ್ಸವಗಳನ್ನು ಸಂಘಟಿಸುವುದು ಮತ್ತು ಆಚರಿಸುವುದು.

    ಜಿಲ್ಲಾಧಿಕಾರಿಗಳು ಹೊಂದಿರುವ ಅಧಿಕಾರದ ಮುಖ್ಯ ಕಾಯ್ದೆಗಳ ಮತ್ತು ಕಾನೂನುಗಳ ವಿವರ

    1. ಕರ್ನಾಟಕ ಮನೆ ನಿವೇಶನಗಳ ಮಂಜೂರಾತಿಗಾಗಿ ಭೂ ಸ್ವಾಧೀನ ಅಧಿನಿಯಮ, 1972.
    2. ಕರ್ನಾಟಕ ಕೃಷಿ ಹುಟ್ಟು ವಳಿ ಮಾರಾಟ(ನಿಯಂತ್ರಣ) ಅಧಿನಿಯಮ 1966 ಮತ್ತು ಅದರಡಿಯ ನಿಯಮಾವಳಿ
    3. ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ 1961
    4. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳ ಮತ್ತು ಪುರಾತತ್ವ ಪ್ರದೇಶ ಹಾಗೂ ಅವಶೇಷಗಳ ಕಾಯ್ದೆ 1961
    5. ಕರ್ನಾಟಕ ಕಮಾಂಡ್ ಏರಿಯಾಸ್ ಡೆವಲಪ್ಮೆಂಟ್ ಆಕ್ಟ್ 1980
    6. ಕರ್ನಾಟಕ ಋಣ ಪರಿಹಾರ ಅಧಿನಿಯಮ 1980
    7. ಕರ್ನಾಟಕ ನೀರಾವರಿ ಕಾಯ್ದೆ 1965
    8. ಕರ್ನಾಟಕ ಅಬಕಾರಿ ಅಧಿನಿಯಮ 1965
    9. ಕರ್ನಾಟಕ ಮುದ್ರಾಂಕ ಅಧಿನಿಯಮ 1957 ಮತ್ತು ನಿಯಮಾವಳಿ 1958.
    10. ಕರ್ನಾಟಕ ಆರೋಗ್ಯಕರ ಅಧಿನಿಯಮ 1962.
    11. ಕರ್ನಾಟಕ ಗೃಹ ರಕ್ಷಕರ ಅಧಿನಿಯಮ 1962
    12. ಕರ್ನಾಟಕ ಕಾನೂನು ನೆರವು ಜಿಲ್ಲಾ ಮತ್ತು ತಾಲ್ಲೂಕು ಸಮಿತಿ ಯೋಜನೆಗಳು 1983
    13. ಕರ್ನಾಟಕ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಗಳ ಕೆಲ ಜಮೀನುಗಳ ಪರಭಾರೆ ನಿಷೇಧ ಅಧಿನಿಯಮ.
    14. ಕರ್ನಾಟಕ ರದ್ದಯಾತಿ ಕಾಯ್ದೆ 1961 ಮತ್ತು ನಿಯಮಾವಳಿ.
    15. ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ 1976.
    16. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965.
    17. ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ನಿಯಮಗಳು 1969.
    18. ಕರ್ನಾಟಕ ಪುರಸಭೆಗಳು ಅಧಿನಿಯಮ
    19. ಕರ್ನಾಟಕ ಟ್ರೆಷರ್ ಟ್ರೋವ್ ಅಧಿನಿಯಮ 1962 ಮತ್ತು 1963.
    20. ಕರ್ನಾಟಕ ಭೂ ಕಂದಾಯ ಕಾಯ್ದೆ 1964.
    21. ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961.
    22. ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಕಾಯ್ದೆ.
    23. ಭಾರತೀಯ ಮುದ್ರಾಂಕ ಅಧಿನಿಯಮ ಕಾಯ್ದೆ.
    24. ಇಂಡಿಯನ್ ಲೂನಸಿ ಆಕ್ಟ್.
    25. ವನ್ಯಜೀವಿ ಸಂರಕ್ಷಣಾ ಕಾಯ್ದೆ,
    26. ಮೋಟಾರು ವಾಹನ ಕಾಯ್ದೆ.
    27. ಕರ್ನಾಟಕ ಜಾನುವಾರು ಅತಿಕ್ರಮ ಪ್ರವೇಶ ಅಧಿನಿಯಮ 1969 .
    28. ಕರ್ನಾಟಕ ಹಬಿಚ್ಯುಯಲ್ ಅಫೆಂಡೆರ್ಸ್ ಕಾಯ್ದೆ.
    29. ಕರ್ನಾಟಕ ಪೊಲೀಸ್ ಅಧಿನಿಯಮ.
    30. ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಅಂಡ್ ಲಾಸ್ ಆಫ್ ಪ್ರಾಪರ್ಟಿ ಆಕ್ಟ್.
    31. ಕರ್ನಾಟಕ ಕಾರಾಗೃಹಗಳ ಕಾಯ್ದೆ.
    32. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ.
    33. ಕರ್ನಾಟಕ ಸಿನೆಮಾಸ್(ರೆಗ್ಯುಲೇಷನ್) ಕಾಯ್ದೆ.
    34. ಕರ್ನಾಟಕ ಅರಣ್ಯ ಕಾಯ್ದೆ
    35. ಕರ್ನಾಟಕ ಬಾಡಿಗೆ ಕಾಯ್ದೆ.
    36. ಬಿಕ್ಷಾಟನಾ ನಿಷೇದ ಕಾಯ್ದೆ.
    37. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ.
    38. ಭಾರತೀಯ ಶಸ್ತ್ರಾಸ್ತ್ರ ಗಳ ಕಾಯ್ದೆ.
    39. ಟೆಲಿಗ್ರಾಫ್ ಆಕ್ಟ್.
    40. ಪಾಯಿಸನ್ಸ್ ಆಕ್ಟ್.
    41. ಸರಕಾರಿ ರಹಸ್ಯಗಳ ಕಾಯ್ದೆ.
    42. ಪೆಟ್ರೋಲಿಯಂ ವಸ್ತುಗಳ ನಿಯಮಗಳು.
    43. ಸ್ಫೋಟಕ ವಸ್ತುಗಳ ಕಾಯ್ದೆ
    44. ಪತ್ರಿಕಾ ಮತ್ತು ನೋಂದಣಿ ಪುಸ್ತಕಗಳ ಕಾಯ್ದೆ.
    45. ಜೀತದಾಳು ನಿರ್ಮೂಲನಾ ಕಾಯ್ದೆ.
    46. ಪೀಪಲ್ ರೆಪ್ರೆಸೆಂಟೇಷನ್ ಆಕ್ಟ್.