ಮುಕ್ತಾಯ

ಉಪವಿಭಾಗ ಮತ್ತು ವಲಯಗಳು

ಮೈಸೂರು ಜಿಲ್ಲೆ – ಉಪ-ವಿಭಾಗೀಯ ಅಧಿಕಾರಿ

ಉಪ-ವಿಭಾಗೀಯ ಅಧಿಕಾರಿಗಳು ವಾಸ್ತವವಾಗಿ ಕಂದಾಯ ಇಲಾಖೆಯ ಈ ಕೆಳಕಂಡ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ:

  1. ಉಪ-ವಿಭಾಗೀಯ ಸಹಾಯಕ ಆಯುಕ್ತರು.
  2. ವಿಶೇಷ ಭೂ ಸ್ವಾಧೀನ ಅಧಿಕಾರಿಗಳು.
  3. ಭೂ ಸುಧಾರಣಾ ವಿಶೇಷ ಸಹಾಯಕ ಆಯುಕ್ತರು.

ಉಪ-ವಿಭಾಗೀಯ ಅಧಿಕಾರಿಗಳು ಜಿಲ್ಲೆಯ ನಿರ್ದಿಷ್ಟ ತಾಲ್ಲೂಕುಗಳ ಉಸ್ತುವಾರಿ ವಹಿಸುತ್ತಾರೆ ಹಾಗೂ ಕಂದಾಯ ಮತ್ತು ಅಭಿವೃದ್ಧಿ ಇಲಾಖೆಗಳ ಮೇಲ್ವಿಚಾರಣೆ ಮಾಡುತ್ತಾರೆ. ಉಪ-ವಿಭಾಗೀಯ ಅಧಿಕಾರಿಗಳು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಸಹ ಆಗಿರುತ್ತಾರೆ. ಕಂದಾಯ ಇಲಾಖೆಯಲ್ಲಿನ ತಹಶೀಲ್ದಾರ್ ಗಳು ಉಪ-ವಿಭಾಗೀಯ ಅಧಿಕಾರಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿರುತ್ತಾರೆ. ಉಪವಿಭಾಗಗಳ ಉಸ್ತುವಾರಿ ವಹಿಸಿರುವ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಯ ಅಧಿಕಾರಗಳನ್ನು ಕರ್ನಾಟಕ ಭೂ ಕಾಯ್ದೆ ಅಧಿನಿಯಮ 1964 ರ ಪ್ರಕಾರ ಮತ್ತು ಅದರಡಿಯಲ್ಲಿ ಬರುವ ಹಲವು ಕಲಂ ಗಳಲ್ಲಿ ಹಾಗೂ ಇತರ ರಾಜ್ಯ ಕಾನೂನಿನಡಿಯಲ್ಲಿ ಅಧಿಕಾರವನ್ನು ಹೊಂದಿರುತ್ತಾರೆ. ಉಪ-ವಿಭಾಗೀಯ ಅಧಿಕಾರಿಯು ತನ್ನ ಆಧೀನದಲ್ಲಿ ಕಾರ್ಯನಿರ್ವಹಿಸುವ ಕಂದಾಯ ಅಧಿಕಾರಿಗಳ ಮೊದಲ ಮೇಲ್ಮನವಿ ಪ್ರಾಧಿಕಾರಿಯು ಮತ್ತು ಕರ್ನಾಟಕ ಭೂಕಂದಾಯ ಕಾಯಿದೆ 1694 ರ ಸೆಕ್ಷನ್ 56 ರ ಪರಿಕ್ಷರಣೆ ಅಧಿಕಾರ ಹೊಂದಿರುತ್ತಾರೆ. ಉಪ-ವಿಭಾಗೀಯ ಅಧಿಕಾರಿಗಳು ಸಾಮಾನ್ಯವಾಗಿ ತನ್ನ ಉಪ-ವಿಭಾಗಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಕೆಲಸವನ್ನು ನಿರ್ವಹಿಸಿತ್ತಾರೆ ಮತ್ತು 1961 ರಲ್ಲಿ ಕರ್ನಾಟಕ ಜಮೀನು ಸುಧಾರಣೆ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಟ್ರಿಬ್ಯೂನಲ್ಗಳ ಅಧ್ಯಕ್ಷರು ಆಗಿರುತ್ತಾರೆ. ವಿಶೇಷ ಭೂಮಿ ಸ್ವಾಧೀನ ಅಧಿಕಾರಿಗಳನ್ನು ಉಪ-ವಿಭಾಗೀಯ ಅಧಿಕಾರಿಗಳು ತನ್ನ ಸಾಮಾನ್ಯ ಕೆಲಸದೊಂದಿಗೆ ನಿರ್ವಹಿಸಬೇಕು.

ಉಪ-ವಿಭಾಗೀಯ ಅಧಿಕಾರಿಗಳು ತಮ್ಮ ಉಪ ವಿಭಾಗದ ಚುನಾವಣಾ ನೋಂದಣಿ ಅಧಿಕಾರಿಗಳಾಗಿರುತ್ತಾರೆ. ಉಪ-ವಿಭಾಗೀಯ ಅಧಿಕಾರಿಗಳು ತನ್ನ ಉಪ-ವಿಭಾಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಸೆಂಬ್ಲಿ ಕ್ಷೇತ್ರಗಳಿಗೆ ರಿಟರ್ನಿಂಗ್ ಆಫೀಸರ್ ಆಗಿರುತ್ತಾರೆ.

ಮೈಸೂರು ಜಿಲ್ಲೆಯು ಮೈಸೂರು ಮತ್ತು ಹುಣಸೂರು ಎಂಬ 2 ಉಪ ವಿಭಾಗಗಳನ್ನು ಹೊಂದಿದೆ. ಮೈಸೂರಿನ 8 ತಾಲ್ಲೂಕುಗಳು ಈ ಉಪ-ವಿಭಾಗಗಳನ್ನು ಅನುಸರಿಸುತ್ತವೆ:

ಉಪ-ವಿಭಾಗೀಯ ತಾಲ್ಲೂಕು
ಮೈಸೂರು ಮೈಸೂರು
  ನಂಜನಗೂಡು
  ಟಿ. ನರಸೀಪುರ
ಹುಣಸೂರು ಹುಣಸೂರು
  ಪಿರಿಯಾಪಟ್ಟಣ
  ಎಚ್ ಡಿ ಕೋಟೆ
  ಕೆ.ಆರ್.ನಗರ
  ಸರಗೂರು