ಮುಕ್ತಾಯ

ತಾಲ್ಲೂಕು ಕಚೇರಿ

ಆಡಳಿತಾತ್ಮಕ ಕ್ರಿಯಾ : ವಿಭಾಗ ವಿವರ

ತಹಶೀಲ್ಧಾರ್

ತಹಶೀಲ್ದಾರ್ ರವರು ಭೂ ಕಂದಾಯ ವಸೂಲಾತಿ , ಗ್ರಾಮ ಲೆಕ್ಕಿಗರ ಮತ್ತು ಕಂದಾಯ ನಿರೀಕ್ಷಕರ ಕಾರ್ಯಗಳ ಮೇಲ್ವಿಚಾರಣೆ, ಕಾರ್ಯ ದಕ್ಷತೆ ಮತ್ತು ಭೂ ದಾಖಲೆಗಳ ನಿರ್ವಹಣೆ ಯ ಬಗ್ಗೆ ಜವಾಬ್ದಾರಾಗಿರುತ್ತಾರೆ.

ತಾಲ್ಲೂಕು ಆಡಳಿತ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಹಕ್ಕು ದಾಖಲೆ/ಭೂದಾಖಲೆಗಳ ನಿರ್ವಹಣೆ ಮುಜರಾಯಿ ನಿರ್ವಹಣೆ, ಚುನಾವಣೆ ಕೆಲಸ, ಬರ ಪರಿಹಾರ, ವೃದ್ದಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಭೂ ಮಂಜೂರಾತಿ, ಸಕ್ರಮೀಕರಣ, ಆಹಾರ ಮತ್ತು ನಾಗರೀಕ ಸರಬರಾಜು ನಿರ್ವಹಣೆ, ಅನ್ಯಕ್ರಾಂತ ಭೂ ಸುಧಾರಣೆ ಕಾಯಿದೆ ಅನುಷ್ಠಾನ, ಭೂ ಸ್ವಾಧೀನ ಪ್ರಕರಣಗಳ ನಿರ್ವಹಣೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳ ಮತ್ತು ಇತರೆ ಪ್ರಮಾಣ ಪತ್ರಗಳನ್ನು ನೀಡುವುದು, ಕುಟುಂಬ ಸದಸ್ಯರ ದೃಢೀಕರಣ ಪತ್ರ, ಕುಟುಂಬ ಭದ್ರತಾ ಯೋಜನೆ, ಕಡತ ತಯಾರಿಸುವುದು, ಸಾರ್ವಜನಿಕ ಕುಂದು ಕೊರತೆ, ಅಸಹಜ ಸಾವು ಪ್ರಕರಣಗಳಲ್ಲಿ ಶವ ಪಂಚನಾಮೆ ಮಾಡುವುದು. ಶಿಷ್ಟಾಚಾರ ನಿರ್ವಹಣೆ, ಜಮಾಬಂದಿ ಕಂದಾಯ/ ನೀರಾವರಿ ತೆರಿಗೆ ಹಾಗೂ ಇತರೆ ಸರ್ಕಾರಿ ಬಾಕಿ ವಸೂಲಿ ಮತ್ತು ಸರ್ಕಾರಿ ಯೋಜನೆ ಗಳ ಅನುಷ್ಠಾನ.

ಅಪರಾಧಿ ಪ್ರಕ್ರಿಯಾ ಸಂಹಿತೆ(ಕ್ರಿಮಿನಲ್ ಪ್ರೊಸಿಜರ್ ಕೋಡ್) ಯಡಿಯಲ್ಲಿ ತಹಶೀಲ್ದಾರ್ ರವರು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ತಹಶೀಲ್ದಾರ್ ರವರು ತಮ್ಮ ತಾಲೂಕಿನ ಚುನಾವಣಾ ನೋಂದಣಿ ಅಧಿಕಾರಿ ಮತ್ತು ಅವರ ತಾಲೂಕುಗಳನ್ನು ಒಳಗೊಂಡ ಅಸೆಂಬ್ಲಿ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ವಿಶೇಷ ತಹಶೀಲ್ದಾರ್ ಇಲ್ಲದಿದ್ದರೆ ಅವರು ಲ್ಯಾಂಡ್ ರಿಫಾರ್ಮ್ಸ್ ಆಕ್ಟ್ ಅಡಿಯಲ್ಲಿ ಸ್ಥಾಪಿಸಲಾದ ಟ್ರಿಬ್ಯೂನಲ್ಗಳ ಕಾರ್ಯದರ್ಶಿಯಾಗಿದ್ದಾರೆ.

ತಹಶೀಲ್ದಾರ್ ಗೆ ನೆರವಾಗಲು ಪ್ರತಿ ತಾಲ್ಲೂಕಿನಲ್ಲಿ ಶಿರಸ್ತೇದಾರ್ / ಉಪ ತಹಸೀಲ್ದಾರರನ್ನು ನೇಮಕ ಮಾಡಲಾಗಿದೆ. ಕೆಎಲ್ಆರ್ ರೂಲ್ಸ್, 1966 ರ ನಿಯಮಗಳ 43 ಮತ್ತು 67 ರ ಅಡಿಯಲ್ಲಿ, ಶಿರಸ್ತೇದಾರ್ ಅಥವಾ ಕಂದಾಯ ಇಲಾಖೆಯ ಯಾವುದೇ ಅಧಿಕಾರಿ ಅವರಿಗೆ ಶ್ರೇಣಿಯಲ್ಲಿ ಸಮಾನ ಅಥವಾ ಉನ್ನತ ಸ್ಥಾನದಲ್ಲಿದ್ದಾಗ ಹಕ್ಕುಗಳ ರೆಕಾರ್ಡ್ ತಯಾರಿಕೆಯ ಹಂತದಲ್ಲಿ ಅಥವಾ ನಿರ್ವಾಹಣೆಯ ಹಂತದಲ್ಲಿ ಉದ್ಭವಿಸುವ ವಿವಾದಿತ ಪ್ರಕರಣಗಳಲ್ಲಿ ಆದೇಶಿಸಬಹುದು. ನಾಡ ಕಚೇರಿ ಉಸ್ತುವಾರಿ ವಹಿಸಿರುವ ಉಪ ತಹಶೀಲ್ದಾರ್ ಗಳು ಸೆಕ್ಷನ್ 94 ರ ಅಡಿಯಲ್ಲಿ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಆಕ್ರಮಿಸಿರುವ ಪ್ರಕರಣಗಳನ್ನು ವಿಲೇವಾರಿ ಮಾಡಬಹುದು.

ಸಂಪರ್ಕಿಸಿ

ಮೈಸೂರು ಜಿಲ್ಲೆಯ ತಹಶೀಲ್ಧಾರ್ ರವರ ಸಂಪರ್ಕ ಮಾಹಿತಿ
ಕ್ರಮ ಸಂಖ್ಯೆ  ತಾಲ್ಲೂಕು ಪಂಚಾಯತ್ ಇ-ಮೇಲ್ ವಿಳಾಸ ಕಚೇರಿ ಸಂಖ್ಯೆ ಸಂಪರ್ಕ ಸಂಖ್ಯೆ
1. ತಹಶೀಲ್ಧಾರ್ – ಮೈಸೂರು mysoretah@yahoo.com 0821-2414811 9739721530
2. ತಹಶೀಲ್ಧಾರ್ – ನಂಜನಗೂಡು tahngud@yahoo.com 08221-2231108 7034395051
3. ತಹಶೀಲ್ಧಾರ್ – ಟಿ. ನರಸೀಪುರ tahtnpura@gmail.com 08227-261233  8088581332
4. ತಹಶೀಲ್ಧಾರ್ – ಕೆ.ಆರ್.ನಗರ tahkrn@yahoo.com  08223-262234 6360161382
5. ತಹಶೀಲ್ಧಾರ್ – ಹುಣಸೂರು tahhun@yahoo.com 08222-252040 9480212069
6. ತಹಶೀಲ್ಧಾರ್ – ಎಚ್.ಡಿ. ಕೋಟೆ  tahhdk1234@gmail.com 08228-255325  9632458049
7. ತಹಶೀಲ್ಧಾರ್ – ಪಿರಿಯಾಪಟ್ಟಣ tahppt@yahoo.com 08223-274175 9738654990
8. ತಹಶೀಲ್ಧಾರ್ – ಸರಗೂರು tahsaraguru@gmail.com 08228296100 9008404949
9. ತಹಶೀಲ್ಧಾರ್ – ಸಾಲಿಗ್ರಾಮ tahsaligrama@gmail.com   9986169260