ಮೈಸೂರು ಜಿಲ್ಲೆ – ಉಪ-ವಿಭಾಗೀಯ ಅಧಿಕಾರಿ
ಉಪ-ವಿಭಾಗೀಯ ಅಧಿಕಾರಿಗಳು ವಾಸ್ತವವಾಗಿ ಕಂದಾಯ ಇಲಾಖೆಯ ಈ ಕೆಳಕಂಡ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ:
- ಉಪ-ವಿಭಾಗೀಯ ಸಹಾಯಕ ಆಯುಕ್ತರು.
- ವಿಶೇಷ ಭೂ ಸ್ವಾಧೀನ ಅಧಿಕಾರಿಗಳು.
- ಭೂ ಸುಧಾರಣಾ ವಿಶೇಷ ಸಹಾಯಕ ಆಯುಕ್ತರು.
ಉಪ-ವಿಭಾಗೀಯ ಅಧಿಕಾರಿಗಳು ಜಿಲ್ಲೆಯ ನಿರ್ದಿಷ್ಟ ತಾಲ್ಲೂಕುಗಳ ಉಸ್ತುವಾರಿ ವಹಿಸುತ್ತಾರೆ ಹಾಗೂ ಕಂದಾಯ ಮತ್ತು ಅಭಿವೃದ್ಧಿ ಇಲಾಖೆಗಳ ಮೇಲ್ವಿಚಾರಣೆ ಮಾಡುತ್ತಾರೆ. ಉಪ-ವಿಭಾಗೀಯ ಅಧಿಕಾರಿಗಳು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಸಹ ಆಗಿರುತ್ತಾರೆ. ಕಂದಾಯ ಇಲಾಖೆಯಲ್ಲಿನ ತಹಶೀಲ್ದಾರ್ ಗಳು ಉಪ-ವಿಭಾಗೀಯ ಅಧಿಕಾರಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿರುತ್ತಾರೆ. ಉಪವಿಭಾಗಗಳ ಉಸ್ತುವಾರಿ ವಹಿಸಿರುವ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಯ ಅಧಿಕಾರಗಳನ್ನು ಕರ್ನಾಟಕ ಭೂ ಕಾಯ್ದೆ ಅಧಿನಿಯಮ 1964 ರ ಪ್ರಕಾರ ಮತ್ತು ಅದರಡಿಯಲ್ಲಿ ಬರುವ ಹಲವು ಕಲಂ ಗಳಲ್ಲಿ ಹಾಗೂ ಇತರ ರಾಜ್ಯ ಕಾನೂನಿನಡಿಯಲ್ಲಿ ಅಧಿಕಾರವನ್ನು ಹೊಂದಿರುತ್ತಾರೆ. ಉಪ-ವಿಭಾಗೀಯ ಅಧಿಕಾರಿಯು ತನ್ನ ಆಧೀನದಲ್ಲಿ ಕಾರ್ಯನಿರ್ವಹಿಸುವ ಕಂದಾಯ ಅಧಿಕಾರಿಗಳ ಮೊದಲ ಮೇಲ್ಮನವಿ ಪ್ರಾಧಿಕಾರಿಯು ಮತ್ತು ಕರ್ನಾಟಕ ಭೂಕಂದಾಯ ಕಾಯಿದೆ 1694 ರ ಸೆಕ್ಷನ್ 56 ರ ಪರಿಕ್ಷರಣೆ ಅಧಿಕಾರ ಹೊಂದಿರುತ್ತಾರೆ. ಉಪ-ವಿಭಾಗೀಯ ಅಧಿಕಾರಿಗಳು ಸಾಮಾನ್ಯವಾಗಿ ತನ್ನ ಉಪ-ವಿಭಾಗಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಕೆಲಸವನ್ನು ನಿರ್ವಹಿಸಿತ್ತಾರೆ ಮತ್ತು 1961 ರಲ್ಲಿ ಕರ್ನಾಟಕ ಜಮೀನು ಸುಧಾರಣೆ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಟ್ರಿಬ್ಯೂನಲ್ಗಳ ಅಧ್ಯಕ್ಷರು ಆಗಿರುತ್ತಾರೆ. ವಿಶೇಷ ಭೂಮಿ ಸ್ವಾಧೀನ ಅಧಿಕಾರಿಗಳನ್ನು ಉಪ-ವಿಭಾಗೀಯ ಅಧಿಕಾರಿಗಳು ತನ್ನ ಸಾಮಾನ್ಯ ಕೆಲಸದೊಂದಿಗೆ ನಿರ್ವಹಿಸಬೇಕು.
ಉಪ-ವಿಭಾಗೀಯ ಅಧಿಕಾರಿಗಳು ತಮ್ಮ ಉಪ ವಿಭಾಗದ ಚುನಾವಣಾ ನೋಂದಣಿ ಅಧಿಕಾರಿಗಳಾಗಿರುತ್ತಾರೆ. ಉಪ-ವಿಭಾಗೀಯ ಅಧಿಕಾರಿಗಳು ತನ್ನ ಉಪ-ವಿಭಾಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಸೆಂಬ್ಲಿ ಕ್ಷೇತ್ರಗಳಿಗೆ ರಿಟರ್ನಿಂಗ್ ಆಫೀಸರ್ ಆಗಿರುತ್ತಾರೆ.
ಮೈಸೂರು ಜಿಲ್ಲೆಯು ಮೈಸೂರು ಮತ್ತು ಹುಣಸೂರು ಎಂಬ 2 ಉಪ ವಿಭಾಗಗಳನ್ನು ಹೊಂದಿದೆ. ಮೈಸೂರಿನ 8 ತಾಲ್ಲೂಕುಗಳು ಈ ಉಪ-ವಿಭಾಗಗಳನ್ನು ಅನುಸರಿಸುತ್ತವೆ:
ಉಪ-ವಿಭಾಗೀಯ | ತಾಲ್ಲೂಕು |
---|---|
ಮೈಸೂರು | ಮೈಸೂರು |
ನಂಜನಗೂಡು | |
ಟಿ. ನರಸೀಪುರ | |
ಹುಣಸೂರು | ಹುಣಸೂರು |
ಪಿರಿಯಾಪಟ್ಟಣ | |
ಎಚ್ ಡಿ ಕೋಟೆ | |
ಕೆ.ಆರ್.ನಗರ | |
ಸಾಲಿಗ್ರಾಮ | |
ಸರಗೂರು |