ಪಾರಂಪರಿಕ ಕಟ್ಟಡಗಳು
ಅಂಬಾ ವಿಲಾಸ ಅರಮನೆ (ಮೈಸೂರು ಅರಮನೆ)
ಮೈಸೂರು ನಗರದ ಹೃದಯಭಾಗದಲ್ಲಿರುವ ಅಂಬಾ ವಿಲಾಸ ಅರಮನೆ ಎಂದೂ ಕರೆಯಲ್ಪಡುವ ಮೈಸೂರು ಅರಮನೆಯು ಮೈಸೂರು ನಗರದ ಪ್ರಮುಖ ಪ್ರವಾಸಿ ತಾಣವಾಗಿದ್ದು, ವರ್ಷಪೂರ್ತಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ವರ್ಷ : 1912
ಲಲಿತ ಮಹಲ್ ಅರಮನೆ
ಮೈಸೂರಿನ ಎರಡನೇ ಅತಿ ದೊಡ್ಡ ಅರಮನೆಯಾದ ಲಲಿತಾ ಮಹಲ್. ಇದು ಕರ್ನಾಟಕ ರಾಜ್ಯದ, ಮೈಸೂರು ನಗರದ ಪೂರ್ವಕ್ಕೆ ಚಾಮುಂಡಿ ಬೆಟ್ಟದ ಬಳಿ ಇದೆ.
ವರ್ಷ : 1921
ಜಗನ್ಮೋಹನ್ ಅರಮನೆ
ಜಗನ್ಮೋಹನ ಅರಮನೆ ಪ್ರಸ್ತುತ ಕಲಾಸಂಗ್ರಹಾಲಯವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆಯಾಗಿರುವ ಜಗನ್ಮೋಹನ ಅರಮನೆ ನಗರದ ಕೇಂದ್ರ ಭಾಗದಲ್ಲಿದೆ.
ವರ್ಷ : 1861
ಚಿತ್ತರಂಜನ್ ಅರಮನೆ
ಚಿತ್ತರಂಜನ್ ಅರಮನೆಯನ್ನು 1916 ರಲ್ಲಿ ಮೈಸೂರು ಮಹಾರಾಜರು ತಮ್ಮ ಸಹೋದರಿಗಾಗಿ ನಿರ್ವಿುಸಿದರು. ಹುಣಸೂರು ರಸ್ತೆಯಲ್ಲಿರುವ ಈ ಅರಮನೆ ಸುಂದರವಾಗಿದ್ದು, ಆಕರ್ಷಕವಾಗಿದೆ.
ವರ್ಷ : 1916
ಜಯಲಕ್ಷ್ಮೀ ವಿಲಾಸ್ ಅರಮನೆ
ಜಯಲಕ್ಷ್ಮೀ ವಿಲಾಸ್ ಅರಮನೆಯು ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾನಪದ ವಸ್ತುಸಂಗ್ರಹಾಲಯವಾಗಿ ಪರಿವರ್ತಿತವಾಗಿದೆ.
ವರ್ಷ : 1905
ಚೆಲುವಾಂಬ ಅರಮನೆ
ವರ್ಷ : 1918
ಚೆಲುವಾಂಬ ಅರಮನೆಯು ಮೈಸೂರು ಜಂಕ್ಷನ್ ರೈಲು ನಿಲ್ದಾಣದ ಸಮೀಪ ಇದೆ. ಸದ್ಯ ಇದು ಕೇಂದ್ರ ಆಹಾರ ಸಂಶೋಧನಾಲಯ (ಸಿಎಫ್‍ಟಿಆರ್ ಐ) ಕಚೇರಿಯಾಗಿ ಬಳಕೆಯಾಗುತ್ತಿದೆ.