ಪ್ರವಾಸೋದ್ಯಮ
ಮೈಸೂರು ಕರ್ನಾಟಕ ರಾಜ್ಯದ ಎರಡನೇ ಪ್ರಮುಖ ನಗರವಾಗಿದ್ದು, ಭಾರತದ 476 ನಗರಗಳಲ್ಲಿ ಸ್ವಚ್ಛ ನಗರವೆಂದು ಗುರುತಿಸಲಾಗಿದೆ. ನಗರವು 128.42 ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ ಮೈಸೂರು. ಈ ನಗರವು ಭಾರತದ ಅರಮನೆ ನಗರವೆಂದು ಗುರುತಿಸಲ್ಪಟ್ಟಿದೆ ಮತ್ತು ಇದು ಒಂದು ಪಾರಂಪರಿಕ ನಗರವೆಂದು ಘೋಷಿಸಲ್ಪಟ್ಟಿದೆ. ನಗರದ ಅಂಬಾ ವಿಲ್ಲಾಸ್ ಅರಮನೆಯು (ಜನಪ್ರಿಯವಾಗಿ ಮೈಸೂರು ಅರಮನೆ ಎಂದು ಕರೆಯಲ್ಪಡುತ್ತದೆ) ಭಾರತದಲ್ಲಿ ಮುಖ್ಯವಾಗಿ ಭೇಟಿ ನೀಡುವ ಸ್ಮಾರಕವಾಗಿದೆ. ಮೈಸೂರಿನ ಪ್ರವಾಸಿ ತಾಣಗಳಲ್ಲಿ ಮುಖ್ಯವಾಗಿ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಸೆಂಟ್ ಫಿಲೋಮಿನಾಸ್ ಚರ್ಚ್, ರೈಲ್ ಮ್ಯೂಸಿಯಂ, ಮೈಸೂರು ಮರಳು ಶಿಲ್ಪ ಮ್ಯೂಸಿಯಂ, ಜಗನ್ಮೋಹನ್ ಅರಮನೆ, ಕಾರಂಜಿ ಕೆರೆ ಮತ್ತು ಉದ್ಯಾನವನ, ಶುಕ ವನಾ, ಕುಕ್ಕರಹಳ್ಳಿ ಕೆರೆ, ಲಲಿತಮಹಲ್ ಅರಮನೆ, ವ್ಯಾಕ್ಸ್ ಮ್ಯೂಸಿಯಂ-ಮೆಲೊಡಿ ಪಾರ್ಕ್ , ರಂಗನಾತಿಟ್ಟು ಪಕ್ಷಿಧಾಮ,ಬೃಂದಾವನ ಉದ್ಯಾನ (ಕೆಆರ್ಎಸ್), ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ(ನಂಜನಗೂಡು), ಶಿವನಸಮುದ್ರ ಜಲಪಾತ ಇತ್ಯಾದಿ.