ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಇಲಾಖೆ ಸ್ಥಾಪನೆಯ ಘನೋದ್ದೇಶ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 1975 ರಲ್ಲಿ ಸ್ಥಾಪನೆಯಾಗಿದ್ದು, ಇದರ ಮುಖ್ಯ ಉದ್ದೇಶ ಮೈಸೂರು ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯೇತರ ಯುವಜನರಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು, ತಮ್ಮ ಪ್ರತಿಭೆಯನ್ನು ಅಭಿವೃದ್ಧಿ ಹೊಂದಲು, ಕ್ರೀಡಾ ತರಬೇತಿ ಶಿಬಿರಗಳನ್ನು ತಾಲ್ಲೂಕುಮಟ್ಟದಲ್ಲಿ ಸಂಘಟಿಸಲು, ತಾಲ್ಲೂಕುಮಟ್ಟದಿಂದ ರಾಜ್ಯ/ರಾಷ್ಟ್ರಮಟ್ಟದವರೆಗೆ ದಸರಾ ಕ್ರೀಡಾಕೂಟ, ಯುವಜನರಲ್ಲಿ ಸಾಹಸ ಪ್ರವೃತ್ತಿ ಬೆಳಸಲು ಸಾಹಸ ಕ್ರೀಡೆಗಳನ್ನು ಹಾಗೂ ಯುವಜನ ಮೇಳ, ಯುವಜನೋತ್ಸವ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಲೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಂಸ್ಕೃತಿ, ಕಲೆ ಮತ್ತು ಕ್ರೀಡೆಗಳನ್ನು ಯುವಜನರ ಮೂಲಕ ಅಭಿವೃದ್ಧಿಪಡಿಸಲು ತಾಲ್ಲೂಕುಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ.
ಜಿಲ್ಲಾ ಕಛೇರಿ:
ಸಹಾಯಕ ನಿರ್ದೇಶಕರು
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಚಾಮುಂಡಿ ವಿಹಾರ್ ಕ್ರೀಡಾಂಗಣ ಮೈಸೂರು-570010 ದೂರವಾಣಿ ಸಂಖ್ಯೆ: 0821-2564179
ಸಂಬಂಧಿತ ಅಂತರ್ಜಾಲಪುಟಗಳು https://ysd.karnataka.gov.in/