ಮೈಸೂರು ಪೇಟ
ಮೈಸೂರು ತನ್ನದೇ ಆದ ವಿಶೇಷ “ಮೈಸೂರು ಪೇಟ”ವನ್ನು ಹೊಂದಿದೆ. ಮೈಸೂರಿನ ಹಿಂದಿನ ರಾಜರು ಧರಿಸಿರುವ ಸಾಂಪ್ರದಾಯಿಕ ಉಡುಪು. ಮೈಸೂರು ಪೇಟ ಪರಂಪರೆ ಮತ್ತು ಸಾಂಸ್ಕೃತಿಕ ಪೂರ್ವವರ್ತಿಗಳ ಸಂಕೇತವಾಗಿ ಇಂದಿಗೂ ಉಳಿಸಿಕೊಳ್ಳಲಾಗಿದೆ. ಮಹಾರಾಜರ ಭವ್ಯ ಪೋಷಾಕಿನಲ್ಲಿ ಅತಿ ಹೆಚ್ಚು ಘನತೆಯನ್ನು ಪಡೆದಿರುವುದು ಝರಿ ಪೇಟ . ಸಣ್ಣ ಹಾಗೂ ಕುಶಲ ಕಲೆಗಾರಿಕೆ , ಬಣ್ಣ ಬಣ್ಣದ ಅಂಚಿನ ರೇಷ್ಮೆಯ ಬಟ್ಟೆಯಿಂದ ತಯಾರಿಸಲಾದ ಮುಂಡಾಸನ್ನು ಮೈಸೂರು ಪೇಟ ಎಂದು ಕರೆಯಲಾಗುತ್ತದೆ. ಮಹಾರಾಜರು ಈ ಪೇಟವನ್ನು ಧರಿಸಿದ್ದ ಕಾರಣಕ್ಕಾಗಿ ಇದೊಂದು ಮನ್ನಣೆ ಸಿಕ್ಕಿದೆ. ಅರಮನೆಯ ರಾಜ ಪರಿವಾರ, ದಿವಾನರು ಹಿರಿಯ ಅಧಿಕಾರಿಗಳು ಈ ಪೇಟವನ್ನು ಧರಿಸುತ್ತಿದ್ದರು. ಅತೀ ಹೆಚ್ಚು ಕಾಲ ರಾಜ್ಯಭಾರ ಮಾಡಿದ ರಾಜವಂಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ಒಡೆಯರ್ ವಂಶಸ್ಥರ ಗುರುತಿನ ಸಂಕೇತವಾಗಿ ಈ ಪೇಟವನ್ನು ಇಂದಿಗೂ ನಮ್ಮ ರಾಜ್ಯದಲ್ಲಿ ಬಳಕೆ ಮಾಡಲಾಗುತ್ತದೆ.
ಘನತೆಯ ಪ್ರತೀಕ ಅತಿಥಿಗಳ ಸನ್ಮಾನ ಸಂದರ್ಭದಲ್ಲಿಯೂ, ಪ್ರಶಸ್ತಿ ಗೌರವವನ್ನು ನೀಡುವ ಸಂದರ್ಭದಲ್ಲಿಯೂ ಮೈಸೂರು ಪೇಟ ತೊಡಿಸುತ್ತಾರೆ. ಈ ಭಾಗದಲ್ಲಿ ಮದುವೆ ನಡೆಯುವ ಸಂದರ್ಭದಲ್ಲಿಯೂ ಮೈಸೂರು ಪೇಟವನ್ನು ಮಧು ಮಗನಿಗೆ ತೊಡಿಸುವುದು ವಾಡಿಕೆಯಾಗಿದೆ .
ದೊರಕುವ ಸ್ಥಳ : ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್
ಮೈಸೂರು ರೇಷ್ಮೆ ಸೀರೆ
ಕರ್ನಾಟಕದಲ್ಲಿ ದೇಶದ ಒಟ್ಟು ಮಲ್ಬೆರಿ (ಹಿಪ್ಪು ನೇರಳೆ) ರೇಷ್ಮೆಗಳಲ್ಲಿ ಸುಮಾರು 70% ರಷ್ಟು ರೇಷ್ಮೆ ಉತ್ಪಾದನೆಯಾಗುತ್ತದೆ.
ಮೈಸೂರಿನಲ್ಲಿರುವ ರೇಷ್ಮೆ ಉದ್ಯಮದ ಬೆಳವಣಿಗೆಯನ್ನು ಮೊದಲು ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಪ್ರಾರಂಭಿಸಲಾಯಿತು. ನಂತರ ಇದು ಜಾಗತಿಕ ಕುಸಿತ, ಆಮದು ರೇಷ್ಮೆ ಮತ್ತು ರೇಯಾನ್ ಸ್ಪರ್ಧೆಯಿಂದ ಹೊಡೆತ ಅನುಭವಿಸಿತು.
ಮೈಸೂರಿನಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆಯ ಬೆಳವಣಿಗೆ, ಪ್ರಸ್ತುತ ಕೆಎಸ್ಐಸಿ ಒಡೆತನದಲ್ಲಿದ್ದು, 1912 ರಲ್ಲಿ ಮೈಸೂರು ಪ್ರಾಂತ್ಯದ ಮಹಾರಾಜರಿಂದ ಸ್ಥಾಪಿಸಲಾಯಿತು. ಆರಂಭದಲ್ಲಿ ರೇಷ್ಮೆ ಬಟ್ಟೆಗಳನ್ನು ರಾಯಲ್ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಮತ್ತು ತಮ್ಮ ಸಶಸ್ತ್ರ ಪಡೆಗಳಿಗೆ ಅಲಂಕಾರಿಕ ಬಟ್ಟೆಗಳನ್ನು ತಯಾರಿಸಲು ಸರಬರಾಜು ಮಾಡಲಾಯಿತು.
ಘಟಕವು 10 ಲೂಮ್ಸ್ನೊಂದಿಗೆ ಪ್ರಾರಂಭವಾಯಿತು ಮತ್ತು ಕ್ರಮೇಣ 44 ಲೂಮ್ಸ್ಗೆ ಹೆಚ್ಚಾಯಿತು. ಲೂಮ್ಸ್ ಮತ್ತು ಪ್ರಿಪರೇಟರಿ ಯಂತ್ರಗಳನ್ನು ಸ್ವಿಟ್ಜರ್ ಲ್ಯಾಂಡ್ ನಿಂದ ಆಮದು ಮಾಡಿಕೊಳ್ಳಲಾಯಿತು ಮತ್ತು ಇದು ಭಾರತದಲ್ಲೇ ಮೊದಲನೆಯದಾಗಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರ ಮೈಸೂರು ರಾಜ್ಯ ರೇಷ್ಮೆ ಕೃಷಿ ವಿಭಾಗವು ರೇಷ್ಮೆ ನೇಯ್ಗೆ ಕಾರ್ಖಾನೆಯ ನಿಯಂತ್ರಣವನ್ನು ತೆಗೆದುಕೊಂಡಿತು.
1980 ರಲ್ಲಿ ಸಿಲ್ಕ್ ನೇಯ್ಗೆ ಕಾರ್ಖಾನೆಯನ್ನು ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ ಗೆ (KSIC) ವಹಿಸಲಾಯಿತು.
ದೊರಕುವ ಸ್ಥಳ : ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್
ಮೈಸೂರು ಮಸಾಲಾ ದೋಸೆ
” ಮಸಾಲಾ ದೋಸೆ “ ಯನ್ನು ಲಘುವಾಗಿ ಬೇಯಿಸಿದ ಆಲೂಗಡ್ಡೆ, ಹುರಿದ ಈರುಳ್ಳಿ ಮತ್ತು ಮಸಾಲೆಗಳನ್ನು ದೋಸೆಯೋಳಗೆ ಮದ್ಯದಲ್ಲಿ ಇಟ್ಟು ತಯಾರಿಸಲಾಗುತ್ತದೆ. ಆಲೂಗಡ್ಡೆ
ಪಲ್ಯ ತಯಾರಿಕೆಯ ಸಮಯದಲ್ಲಿ ಮಸಾಲೆ ಪದಾರ್ಥದಿಂದ (ಮಸಾಲಾ) ಕೂಡಿದ್ದುದ್ದರಿಂದ ಮಸಾಲಾ ದೋಸಾ ಎಂದು ಕರೆಯಲ್ಪಡುತ್ತದೆ.
ಇದು ವಿಶ್ವದ ಹತ್ತು ರುಚಿಕರವಾದ ಆಹಾರಗಳಲ್ಲಿ ಒಂದು (2012) ಎಂದು ಉಲ್ಲೇಖಿಸಲಾಗಿದೆ ಮತ್ತು 2011 ರಲ್ಲಿ ಪ್ರಪಂಚದ 50 ಅತ್ಯಂತ ರುಚಿಕರವಾದ ಆಹಾರಗಳಲ್ಲಿ ಇದು 39 ನೇ ಸ್ಥಾನ ಪಡೆದಿದೆ.
ದೊರಕುವ ಸ್ಥಳ : ಮೈಸೂರಿನ ಹೆಚ್ಚಿನ ರೆಸ್ಟೋರೆಂಟ್ (ಉಪಹಾರ ಗೃಹ) ಗಳಲ್ಲಿ ಲಭ್ಯವಿದೆ
ಮೈಸೂರು ಅಗರಬತ್ತಿ
ದೇಶದ ಅಗರಬತ್ತಿ ಉದ್ಯಮಕ್ಕೆ ಮೈಸೂರಿನ ಕೊಡುಗೆ ದೊಡ್ಡದು. ಮೈಸೂರಿನ ಅಗರಬತ್ತಿಗೆ ತನ್ನದೇ ಆದ ವಿಶಿಷ್ಟ ಛಾಪಿದೆ.
ಮಹಾರಾಜರ ಕಾಲದಲ್ಲಿಯೇ ಶ್ರೀಗಂಧಕ್ಕಾಗಿ ಮೈಸೂರು ಬಹಳ ಪ್ರಸಿದ್ಧವಾಗಿತ್ತು. ಹೀಗಾಗಿ, ಗಂಧದ ಮರದೊಳಗಿನ ಅಂಶವನ್ನೂ ಹಾಗೂ ವಾಸನೆಯುಕ್ತ ಗಂಧದ ತೊಗಟೆಯಿಂದ ಮಾಡಿದ ಪುಡಿಯನ್ನೂ ಬೆರೆಸಿ ಕಡ್ಡಿಗಳನ್ನು ತಯಾರಿಸಿದಾಗ ಅಗರಬತ್ತಿಗೆ ‘ಗಂಧದಕಡ್ಡಿ’ ಎನ್ನುವ ಹೆಸರೂ ಬಂದಿತು. ಮೊದಮೊದಲು ಅರಮನೆಗೆ ಮಾತ್ರವೇ ಗಂಧದ ಕಡ್ಡಿ ಸರಬರಾಜಾಗುತ್ತಿತ್ತು. ಅರಸರ ಮಲಗುವ ಕೋಣೆ, ದರ್ಬಾರ್ ಹಾಲ್, ದೇವಸ್ಥಾನ, ಹಜಾರ… ಹೀಗೆ ಆಯ್ದ ಸ್ಥಳಗಳಲ್ಲಿ ಮಾತ್ರವೇ ಬಳಸಲೆಂದು ವಿಶೇಷವಾಗಿಯೇ ದರ್ಬಾರ್ ಅಗರಬತ್ತಿಗಳು ತಯಾರಾಗಿ ಬೇಡಿಕೆ ಪಡೆದುಕೊಂಡವು.
ಎಲ್ಲಿ ಖರೀದಿಸಬೇಕು :ಮೈಸೂರಿನ ಪ್ರಮುಖವಾದ ಅಂಗಡಿಗಳಲ್ಲಿ ದೊರಕುತ್ತದೆ.
ಮೈಸೂರು ಪಾಕ್
ಮೈಸೂರು ಪಾಕ್ ಇದು ಕರ್ನಾಟಕ ರಾಜ್ಯದ ಹೆಸರಾಂತ ಸಿಹಿ ಭಕ್ಷ್ಯವಾಗಿದ್ದು, ಇದನ್ನು ಹೆಚ್ಚಿನ ಪ್ರಮಾಣದ ತುಪ್ಪ (ಬೆಣ್ಣೆ ಕಾಯಿಸಿದ), ಸಕ್ಕರೆ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಕನ್ನಡದಲ್ಲಿ ಪಾಕ್ ಅಥವಾ ಪಾಕ ಎಂದರೆ ಸಕ್ಕರೆಯ ದ್ರಾವಣ ಅಥವಾ ಸಾಮಾನ್ಯವಾಗಿ ಪಾಕವನ್ನು ನಳಪಾಕ ಮತ್ತು ಭೀಮಪಾಕಗಳಿಗೆ ಹೋಲುವ ಭಕ್ಷ್ಯವೆಂದು ಕರೆಯಲಾಗುತ್ತದೆ. ಇದರ ಹುಟ್ಟಿನ ಹಿಂದಿನ ದಂತ ಕಥೆ ಏನೆಂದರೆ, ಮೈಸೂರುಪಾಕ್ ಅನ್ನು ಮೊದಲು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾಕಾಸುರ ಮಾದಪ್ಪ ಹೆಸರಿನ ಅಡುಗೆ ಭಟ್ಟರಿಂದ ಈ ಸಿಹಿ ಪದಾರ್ಥವು ತಯಾರಾಯಿತು. ಅರಮನೆಯ ಅಡುಗೆ ಭಟ್ಟರು ಸುಮ್ಮನೆ ತಮಗೆ ತೋಚಿದ ಹಾಗೇ ಕೈಗೆ ಸಿಕ್ಕ ಪದಾರ್ಥಗಳಾದ ಕಡಲೇಹಿಟ್ಟು, ತುಪ್ಪ ಮತ್ತು ಸಕ್ಕರೆಯ ಮಿಶ್ರಣದಿಂದ ತಯಾರಿಸಿದರು. ಈ ಸಿಹಿಯು ಮೈಸೂರು ಮಹಾರಾಜರನ್ನು ತುಂಬಾ ಸಂತೋಷಪಡಿಸಿದ ಕಾರಣ ಇದು “ರಾಯಲ್ ಸ್ವೀಟ್” ಆಗಿ ಮಾರ್ಪಟ್ಟಿತು. ಈ ಸಿಹಿ ಪದಾರ್ಥದ ಹೆಸರನ್ನು ಮಾದಪ್ಪ ಅವರಲ್ಲಿ ಕೇಳಿದಾಗ, ನಿಸ್ಸಂಶಯವಾಗಿ ಅದರ ಹೆಸರೆನೆಂಬುದೇ ಅವರಿಗೆ ಗೊತ್ತಿರಲಿಲ್ಲ. ಆದ್ದರಿಂದ ಅವರು ಇದನ್ನು ಮೈಸೂರು ಪಾಕು ಎಂದು ಕರೆದರು. ಇದು ಮೈಸೂರು ಅರಮನೆಯಿಂದ ತಯಾರಾದ ಒಂದು ಸವಿಯಾದ ಪದಾರ್ಥವಾಗಿದೆ. ಮೈಸೂರಿನ ಮಹಾರಾಜರು ಸಿಹಿಯನ್ನು ಸವಿದಿದ್ದು ಅಷ್ಟೇ ಅಲ್ಲದೆ ಅರಮನೆಯ ಮೈದಾನದ ಹೊರಗಡೆ ಅಂಗಡಿಯನ್ನು ಸ್ಥಾಪಿಸಲು ಮಾದಪ್ಪನಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಇದು ಸಾಮಾನ್ಯ ಜನರಿಗೂ ಲಭ್ಯವಾಗುವಂತೆ ಮಾಡಿತು.
ದೊರಕುವ ಸ್ಥಳ : ಮೈಸೂರಿನ ಪ್ರಮುಖವಾದ ಸಿಹಿ ಅಂಗಡಿಗಳಲ್ಲಿ ದೊರಕುತ್ತದೆ.
ಮೈಸೂರು ಶ್ರೀಗಂಧದ ಎಣ್ಣೆ
ಪಾಶ್ಚಿಮಾತ್ಯರಲ್ಲಿ ಶ್ರೀಗಂಧದ ಎಣ್ಣೆಯು ಬಹುಶಃ ಸುವಾಸನೆಗೆ, ದೇಹವನ್ನು ಬೆಚ್ಚಗಿಡಲು ಹಾಗೂ ಶ್ರೀಗಂಧದ ತೈಲವನ್ನು ದೇಹದ ಪರಿಮಳಕ್ಕೆ ಮತ್ತು ಸುಗಂಧ ದ್ರವ್ಯಕ್ಕೆ, ಗಂಡಸರ ಗಡ್ಡವನ್ನು ಸ್ವಚ್ಛಗೊಳಿಸಿದ ನಂತರ ಮತ್ತು ಇತರೆ ಸೌಂದರ್ಯವರ್ಧಕಗಳಿಗೆ ಪರಿಮಳಯುಕ್ತ ಪದಾರ್ಥವಾಗಿ ಉಪಯೋಗಿಸುವ ಅಂಶ ಕಂಡುಬಂದಿದೆ. ಆದರೆ ಭಾರತದ ಪೂರ್ವ ಇತಿಹಾಸದಿಂದಲೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಶ್ರೀಗಂಧದ ಮರವು ಒಂದು ಭಾಗವಾಗಿದೆ ಮತ್ತು ಸಾವಿರಾರು ವರ್ಷಗಳಿಂದ ಇದನ್ನು ಸಾಂಪ್ರದಾಯಿಕ ಔಷಧಿಗಳಲ್ಲಿಯು ಪರಿಣಾಮಕಾರಿಯಾಗಿ ಬಳಸಲ್ಪಟ್ಟಿದೆ.
ದೊರಕುವ ಸ್ಥಳ : ಕರ್ನಾಟಕ ಸಾಬೂನು ಮತ್ತು ಡಿಟರ್ ಜೆಂಟ್ ಲಿ.,
ಮೈಸೂರು ವಿಳೇದೆಲೆ
ಅರ್ಧ ಶತಮಾನದ ಹಿಂದೆ, ಈ ಚಿಕ್ಕ ಹಸಿರು ಎಲೆಗಳನ್ನು ಸುಮಾರು 100 ಎಕರೆಗಳಷ್ಟು ಮೈಸೂರು-ನಂಜನಗೂಡು ರಸ್ತೆಯನ್ನು ಸಂಪರ್ಕಿಸುವ ಹಳೇ ಅಗ್ರಹಾರದಲ್ಲಿನ ಪೂರ್ಣಯ್ಯ ಛತ್ರದಿಂದ ವಿದ್ಯಾರಣ್ಯಪುರಂ ಜಂಕ್ಷನ್ ವರಗೆ ಬೆಳೆಸಲಾಗಿತ್ತು. ಅಷ್ಟೇ ಅಲ್ಲದೇ, ನೆರೆಹೊರೆಯ ಪ್ರದೇಶಗಳಲ್ಲಿ ಈ ಬೆಳೆಯನ್ನು ಇನ್ನೂ ಸುಮಾರು 500 ಎಕರೆ ಪ್ರದೇಶದಲ್ಲಿ ಬೆಳೆಸಲಾಯಿತು. ಮೈಸೂರು ಚಿಗುರೆಲೆಯು ಸರಿಸಾಟಿಯಿಲ್ಲದ ರುಚಿಯನ್ನು ಹೊಂದಿರುವುದರಿಂದ ಇದಕ್ಕೆ ಹೆಚ್ಚಿನ ಆದ್ಯತೆ ನೀಡಿ ಬೆಳೆಸಲಾಯಿತು. ಇದಕ್ಕೆ ಮುಖ್ಯ ಕಾರಣ ಇಲ್ಲಿನ ವಿಶಿಷ್ಟ ವಾತಾವರಣ ಮತ್ತು ಬಹುಶಃ ಮಣ್ಣು ವಿಶಿಷ್ಟವಾದ ರುಚಿಯನ್ನು ನೀಡಿರಬಹುದು. ಈ ಕಾರಣದಿಂದಾಗಿ ‘ಮೈಸೂರು ಚಿಗುರೆಲೆ’ ಎಂಬ ಹೆಸರನ್ನು ಪಡೆದುಕೊಂಡಿತು. ಆದರೆ, ‘ಪಾನ್’ (ವಿಳೆದೇಲೆ) ಕ್ರಮೇಣ ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸುವ ಮೂಲಕ, ಇದು ಧಾರ್ಮಿಕ ಸಮಾರಂಭಗಳಿಗೆ ಮಾತ್ರ ಸೀಮಿತ ಗೊಳ್ಳುವಂತಾಗಿದೆ.
ದೊರಕುವ ಸ್ಥಳ : ದೇವರಾಜ ಮಾರುಕಟ್ಟೆ – ಮೈಸೂರು
ಮೈಸೂರು ಗಂಜೀಫಾ ಕಾರ್ಡುಗಳು
ನೈಸರ್ಗಿಕ ಬಣ್ಣಗಳು ಮತ್ತು ಚಿನ್ನದ ಹಾಳೆಯನ್ನು ಬಳಸಿಕೊಂಡು ಈ ಆಟವಾಡುವ ಕಾರ್ಡ್ ಗಳು ಸೂಪರ್ ಫೈನ್ ಕುಂಚದಿಂದ ಚಿತ್ರಿಸಲ್ಪಟ್ಟಿವೆ. ಇದು ದಂತ-ಬೋರ್ಡ್ ಅಥವಾ ಸ್ಯಾಂಡಲ್-ಮರದ ಹಾಳೆಗಳಿಂದ ವಿವಿಧ ಆಕಾರಗಳಲ್ಲಿ ತಯಾರಿಸಲ್ಪಡುತ್ತದೆ. ಮೂಲತಃ ಭಾರತದ ಸಾವಿರ ವರ್ಷದಷ್ಟು ಹಳೆಯದಾದ ಈ ಗಂಜೀಫಾ ಪ್ಲೇಯಿಂಗ್ ಕಾರ್ಡ್ ಸಂಸ್ಕೃತದಲ್ಲಿ “ಕ್ರೀಡಾಪತ್ರ/ ಕ್ರೀಡಾ ಪತ್ರೆ” ಎಂದು ಕರೆಯಲಾಗುತ್ತದೆ. ಮೊಘಲ್ ಆಳ್ವಿಕೆಯಲ್ಲಿ ಇದು ಒಳಾಂಗಣ ಆಟವಾಗಿ ರಾಜ ಮಹಾರಾಜರು ತಮ್ಮ ಸಮಯವನ್ನು ಕಾಲಕ್ಷೇಪ ಮಾಡಲು ಅನುಕೂಲವಾಯಿತು. ಪ್ರಸ್ತುತ ಈಗಲೂ ಕೆಲವು ಕಲಾವಿದರು ಮಾತ್ರ ಈ ಶೈಲಿಯನ್ನು ಅನುಸರಿಸುತ್ತಿದ್ದಾರೆ ಹಾಗೂ ಬಳಸುತ್ತಿದ್ದಾರೆ.
ದೊರಕುವ ಸ್ಥಳ : ಕಾವೇರಿ ಕರಕುಶಲ ಎಂಪೋರಿಯಂ
ಮೈಸೂರು ಮಲ್ಲಿಗೆ
ಮೈಸೂರು ಮಲ್ಲಿಗೆ (ಬಟಾನಿಕಲ್ ಹೆಸರು: ಜಾಸ್ಮಿನಮ್ ಗ್ರ್ಯಾಂಡಿಫ್ಲೋರಮ್ ಎಲ್.) ಕರ್ನಾಟಕದಲ್ಲಿ ಒಲೀಸೇ ಕುಟುಂಬದ ಮೂರು ವಿಧದ ಮಲ್ಲಿಗೆ ಜಾತಿಗಳಲ್ಲಿ ಇದು ಅತ್ಯಂತ ಜನಪ್ರಿಯ ಹೆಸರುವಾಸಿಯಾಗಿದೆ. ಇತರ ಎರಡು ಪ್ರಭೇದಗಳೆಂದರೆ ಹಡಗಲಿ ಮಲ್ಲಿಗೆ (Jasminum auriculatum Vahl) ಮತ್ತು ಉಡುಪಿ ಮಲ್ಲಿಗೆ (Jasminum sambac (L.) Aiton). ಪ್ರಪಂಚದಾದ್ಯಂತ ಪ್ರಸಿದ್ಧವಾದ ಸುಗಂಧ ದ್ರವ್ಯಕ್ಕಾಗಿ ಎಲ್ಲಾ ಮೂರು ಹೂವಿನ ಪ್ರಭೇದಗಳ ಮೇಲೆ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್- ನೀತಿಯ) ಅಡಿಯಲ್ಲಿ ಪೇಟೆಂಟ್ ಗಾಗಿ ನೋಂದಾಯಿಸಲಾಗಿದೆ.
ಮೈಸೂರು ಮಲ್ಲಿಗೆ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿರುವ ಇದು ಮೈಸೂರು ನಗರ ಮತ್ತು ಹೆಚ್ಚಾಗಿ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬೆಳೆಯಲಾಗುತ್ತದೆ. ಮೈಸೂರಿನ ರಾಜಮನೆತನದವರಿಂದ ಮೈಸೂರು ಮಲ್ಲಿಗೆಯು ಪೋಷಿಸಲ್ಪಟ್ಟಿದೆ. ಏಕೆಂದರೆ ಅದರ ಸುಗಂಧವು ಅಕ್ಟೋಬರ್ ತಿಂಗಳಿನಲ್ಲಿ ಪ್ರತಿವರ್ಷ ನಗರದಲ್ಲಿ ನಡೆಯುವ ಪ್ರಸಿದ್ಧ ದಸರಾ ಉತ್ಸವದಂತೆ ಪ್ರಬಲವಾಗಿದೆ. ಮಲ್ಲಿಗೆಯು ಮುಕ್ತ ಪ್ರದೇಶಗಳಲ್ಲಿ ವಿಶೇಷ ಕೃಷಿಭೂಮಿಯಲ್ಲಿ, ಮನೆಗಳ ಮುಂಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಲಾಭದ ಬೆಳೆಯಾಗಿ ಬೆಳೆಯುತ್ತದೆ. ಮೈಸೂರು ಮಲ್ಲಿಗೆ, ಮೈಸೂರು ನಗರದಲ್ಲಿ ಮತ್ತು ಹೆಚ್ಚಾಗಿ ಸಣ್ಣ ರೈತರಿಗೆ ಬೆಳೆಯುವ ಒಂದು ಸಮರ್ಥ ಬೆಳೆಯಾಗಿದೆ. ಈ ಋತುವಿನ ಹೂವಿನ ಎರಡು ಬೆಳೆಗಳನ್ನು ರೈತರು ಪಡೆಯುತ್ತಾರೆ. ಸ್ಥಳೀಯ ಮಾರುಕಟ್ಟೆ ಹೊರತುಪಡಿಸಿ, ಹೂವು ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿಯೂ ಬೇಡಿಕೆಯಿದೆ.
ದೊರಕುವ ಸ್ಥಳ : ದೇವರಾಜ ಮಾರುಕಟ್ಟೆ – ಮೈಸೂರು
ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳು
ಈ ವಿಶಿಷ್ಟವಾದ ವರ್ಣಚಿತ್ರದ ಶೈಲಿಯೂ ಕ್ರಿ.ಶ. 1525 ರಲ್ಲಿ ಹುಟ್ಟಿಕೊಂಡಿತು. ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ III (1799-1868)ರ ಅವಧಿಯಲ್ಲಿಈ ಶೈಲಿಯು ಸಂಪೂರ್ಣವಾಗಿ ಬೆಳೆದಿತು. ಪ್ರಸ್ತುತ ಮೈಸೂರಿನ ಕಲಾವಿದರಿಂದಾಗಿ ಪುನರುಜ್ಜೀವನಗೊಂಡಿತು. ಚಿತ್ರಕಲೆ ವಿಧಾನವು ಮೂಲಭೂತ ‘ಗೆಸ್ಸೊ’ ಕೆಲಸ ಮತ್ತು ಸಾಂಪ್ರದಾಯಿಕ ಬಣ್ಣಗಳ ಬಳಕೆ ಮತ್ತು ಅಲಂಕರಣಕ್ಕಾಗಿ ತೆಳುವಾದ ನಿಜವಾದ ಚಿನ್ನದ ಹಾಳೆಯನ್ನು ಒಳಗೊಂಡಿದೆ. ಅತ್ಯಂತ ಜನಪ್ರಿಯ ವಿಷಯವೆಂದರೆ ಹಿಂದೂ ದೇವತೆ ಮತ್ತು ಸಂಪ್ರದಾಯದಂತೆ, ಸಾಂಪ್ರದಾಯಿಕ ದೇವತೆಗಳನ್ನು ಹೊಂದಿರುವುದು. ಮೈಸೂರು ಶೈಲಿಯ ವರ್ಣಚಿತ್ರವು ಬಣ್ಣಗಳ ಸಂಕೀರ್ಣ ಬಳಕೆ ಮತ್ತು ಉತ್ತಮ ಹಿಡಿತವನ್ನು ಹೊಂದಿದ್ದು, ಇದುವರೆಗೂ ಜತನವಾಗಿ ರಕ್ಷಿಸಲ್ಪಡುತ್ತಿದೆ.
ದೊರಕುವ ಸ್ಥಳ : ಕಾವೇರಿ ಕರಕುಶಲ ಎಂಪೋರಿಯಂ
ಮೈಸೂರು ಸ್ಯಾಂಡಲ್ ಸೋಪ್
ಭಾರತದ ಮೈಸೂರು ರಾಜ್ಯವು 20ನೇ ಶತಮಾನದಲ್ಲಿ ವಿಶ್ವದಲ್ಲೇ ಶ್ರೀಗಂಧದ ದೊಡ್ಡ ಉತ್ಪಾದಕರಲ್ಲಿ ಒಂದಾಗಿತ್ತು ಹಾಗೂ ಇದು ಶ್ರೀಗಂಧದ ಮರದ ಪ್ರಮುಖ ರಫ್ತುದಾರರಲ್ಲೊಂದಾಗಿತ್ತು, ಇವುಗಳಲ್ಲಿ ಹೆಚ್ಚಿನವು ಯುರೋಪ್ ಗೆ ರಫ್ತಾಗುತ್ತಿದ್ದವು. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಯುದ್ಧದ ಕಾರಣದಿಂದಾಗಿ ರಫ್ತು ಮಾಡಲಾಗದ ಕಾರಣ ಸಾಕಷ್ಟು ಶ್ರೀಗಂಧದ ಮರ ರಫ್ತು ಆಗದೆ ಉಳಿದುಕೂಂಡಿತು. ಸದರಿ ಉಳಿಕೆಗೊಂಡ ಮರದ ಉಪಯೋಗ ಮಾಡಲಿಕ್ಕಾಗಿ ಮೈಸೂರಿನ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿನ ಸರ್ಕಾರಿ ಸೋಪ್ ಫ್ಯಾಕ್ಟರಿ ಸ್ಥಾಪಿಸಿದರು. 1916ರಲ್ಲಿ ಸ್ಥಾಪನೆಯಾದ ಈ ಕಾರ್ಖಾನೆ, ಶ್ರೀಗಂಧದ ತೈಲವನ್ನು ಪ್ರಮುಖ ಘಟಕಾಂಶವಾಗಿ ಬಳಸುವ ಮೈಸೂರು ಸ್ಯಾಂಡಲ್ ಸೋಪ್ ಅಡಿಯಲ್ಲಿ ಸೋಪ್ ಗಳನ್ನು ತಯಾರಿಸಲು ಪ್ರಾರಂಭಿಸಿತು. ಮರದಿಂದ ಶ್ರೀಗಂಧದ ಎಣ್ಣೆಯನ್ನು ಬಟ್ಟಿ ಇಳಿಸಲು ಒಂದು ಕಾರ್ಖಾನೆ ಮೈಸೂರಿನಲ್ಲಿ ಅದೇ ವರ್ಷದಲ್ಲಿ ಸ್ಥಾಪಿಸಲಾಯಿತು. 1944 ರಲ್ಲಿ ಶಿವಮೊಗ್ಗದಲ್ಲಿ ಮತ್ತೊಂದು ಶ್ರೀಗಂಧದ ತೈಲ ಕಾರ್ಖಾನೆ ಸ್ಥಾಪಿಸಲಾಯಿತು. ಕರ್ನಾಟಕದ ಏಕೀಕರಣದ ನಂತರ, ಈ ಎರಡೂ ಕಾರ್ಖಾನೆಗಳು ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಒಳಪಟ್ಟವು. 1980ರಲ್ಲಿ, ಈ ಕಾರ್ಖಾನೆಗಳನ್ನು ವಿಲೀನಗೊಳ್ಳಲು ಸರ್ಕಾರವು ನಿರ್ಧರಿಸಿತು ಮತ್ತು ಅವುಗಳನ್ನು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಸೇರಿಸಿಕೊಳ್ಳಲಾಯಿತು. ಸಿಂಹದ ದೇಹ ಮತ್ತು ಆನೆಯ ತಲೆ ಹೊಂದಿರುವ ಪೌರಾಣಿಕ ಜೀವಿ ಶರಭವನ್ನು ಕಂಪನಿಯ ಲಾಂಛನವಾಗಿ ಆಯ್ಕೆ ಮಾಡಲಾಯಿತು. ಏಕೆಂದರೆ ಇದು ಜೀವಿಯ ಬುದ್ಧಿವಂತಿಕೆ, ಧೈರ್ಯ ಮತ್ತು ಶಕ್ತಿಯ ಸಮಗ್ರ ಗುಣಗಳನ್ನು ಪ್ರತಿನಿಧಿಸುತ್ತದೆ ಮತ್ತು ಕಂಪನಿಯ ತತ್ತ್ವವನ್ನು ಸಂಕೇತಿಸುತ್ತದೆ. ಕಂಪನಿಯು ವೈವಿಧ್ಯಮಯವಾಗಿರುವುದರಿಂದ ಮತ್ತು ಸಾಬೂನುಗಳ ಹೊರತುಪಡಿಸಿ ಧೂಪದ್ರವ್ಯ ಸುಗಂಧದ ಕಡ್ಡಿಗಳು, ಟಾಲ್ಕಂ ಪುಡಿ ಮತ್ತು ಮಾರ್ಜಕಗಳನ್ನು ತಯಾರಿಸುತ್ತದೆ.
ದೊರಕುವ ಸ್ಥಳ : ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್
ಮೈಸೂರು ಬೀಟೆಮರದ ಕೆತ್ತನೆಗಳು
ಬ್ರಿಟಿಷ್ ಬರಹಗಾರರು ಉಲೇಖಿಸುವಂತೆ ಮೈಸೂರಿನಲ್ಲಿ ಸಾವಿರಾರು ಕಾರ್ಮಿಕರು ಬೀಟೆಮರದ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಈಗಲೂ ಸಹ ಮೈಸೂರಿನ ಸುಮಾರು 4000 ಜನ ಬೀಟೆಮರದ ಕೆತ್ತನೆ ಕೆಲಸದಲ್ಲಿ ತೊಡಗಿದ್ದಾರೆ. ಈ ಕೆಲಸವು ಅನೇಕ ಸಂಕೀರ್ಣವಾದ ಹಂತಗಳನ್ನು ಒಳಗೊಂಡಿರುತ್ತದೆ. ಬೀಟೆಮರದ ಕೆತ್ತನೆಯಲ್ಲಿ ಚಿತ್ರಗಳನ್ನು ಮತ್ತು ವಿನ್ಯಾಸಗಳನ್ನು ರಚಿಸುವುದು ಮೊದಲ ಹಂತವಾಗಿದೆ, ನಂತರ ಬೀಟೆಮರದಲ್ಲಿ ಮರಗೆಲಸದಿಂದ ಸರಿಯಾದ ಆಕಾರದಲ್ಲಿ ಕತ್ತರಿಸಲಾಗುತ್ತದೆ. ಬೀಟೆಮರದ ಕೆತ್ತನೆಯಲ್ಲಿ ಮಾಡಲಾಗುವ ವೈವಿದ್ಯ ಅಲಂಕಾರಗಳನ್ನು ಸೂಕ್ಷ್ಮ ರೀತಿಯಿಂದ ಅಳವಡಿಸಬೇಕಾದ ಪ್ರದೇಶಗಳಿಂದ ಎಚ್ಚರಿಕೆಯಿಂದ ಜೋಡಿಸಲ್ಪಡುತ್ತದೆ, ನಂತರ ಮರಳು ಕಾಗದವನ್ನು ಬಳಸಿ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಈ ರೀತಿ ಮಾಡುವುದರಿಂದ ಹೆಚ್ಚು ನಯಗೊಳಿಸಲಾಗುತ್ತದೆ ಮತ್ತು ತುಂಬ ಸುಂದರವಾಗಿ ಹಾಗೂ ನುಣುಪಾಗಿ ಕಾಣುತ್ತದೆ.
ದೊರಕುವ ಸ್ಥಳ : ಕಾವೇರಿ ಕರಕುಶಲ ಎಂಪೋರಿಯಂ