ಮುಕ್ತಾಯ

ಕಬಿನಿ ಅಥವಾ ಕಪಿಲಾ ನದಿ

ನಿರ್ದೇಶನ

ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವೈನಾಡು ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂದವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲ ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಇದು ಸರಗೂರು ಪಟ್ಟಣದ ಹತ್ತಿರ ಬೃಹತ್ ಕಬಿನಿ ಆಣೆಕಟ್ಟಿನಲ್ಲಿ ಅದರ ನೀರು ಸಂಗ್ರಹಿಸಲಾಗುತ್ತದೆ . ಬೇಸಿಗೆಯಲ್ಲಿ ಈ ನದಿಯ ಹಿನ್ನೀರಿನಲ್ಲಿ ವಿಶೇಷವಾದ ವನ್ಯಜೀವಿ ಬಹಳ ಹೇರಳವಾಗಿರುತ್ತವೆ. ಕಬಿನಿ ಅಣೆಕಟ್ಟಿನ ಉದ್ದ ೨.೨೮೪ ಅಡಿ (೬೯೬ ಮೀ), ೧೯.೫೨ ಟಿಎಂಸಿ ಯಷ್ಟು ನೀರನ್ನು ಒಟ್ಟು ಶೇಖರಿಸಬಹುದು, ಕಬಿನಿ ಅಣೆಕಟ್ಟು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸರಗೂರು ಪಟ್ಟಣದಿಂದ ೧೭ ಕಿ.ಮೀ. (೧೧ ಮೈಲು) ಮತ್ತು ೬ ಕಿ.ಮೀ. (೪.೫ ಮೈಲು) ದೂರದ ಗ್ರಾಮಗಳಾದ ಬೀಚನಹಳ್ಳಿ ಮತ್ತು ಬಿದರಹಳ್ಳಿಯ ನಡುವೆ ಸ್ಥಾಪಿತವಾಗಿದೆ.

ಫೋಟೋ ಗ್ಯಾಲರಿ

  • ಕಬಿನಿ ನದಿ
    ಕಬಿನಿ ಹಿನ್ನೀರು - ಮೈಸೂರು
  • ಕಬಿನಿ ಆಣೆಕಟ್ಟು
    ಕಬಿನಿ ಆಣೆಕಟ್ಟು - ಎಚ್.ಡಿ.ಕೋಟೆ, ಮೈಸೂರು
  • ನೀರು ತುಂಬಿರುವ ಕಬಿನಿ ಅಣೆಕಟ್ಟು
    ಕಬಿನಿ ಹಿನ್ನೀರು - ಮೈಸೂರು

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ನಿಲ್ದಾಣ: 61.8 ಕಿ.ಮೀ

ರೈಲಿನಿಂದ

ರೈಲು ನಿಲ್ದಾಣ: 61.4 ಕಿ.ಮೀ

ರಸ್ತೆ ಮೂಲಕ

ನಗರ ಬಸ್ ನಿಲ್ದಾಣ ( ಸಬರ್ಬ್ ) : 61.8 ಕಿ.ಮೀ