ಮುಕ್ತಾಯ

ಜಗನ್ಮೋಹನ ಅರಮನೆ

ನಿರ್ದೇಶನ

ಮುಖ್ಯ ಅರಮನೆಯ ಪೂರ್ವ ಭಾಗದಲ್ಲಿ ಜಗನ್ಮೋಹನ ಅರಮನೆಯನ್ನು ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ 1861ರಲ್ಲಿ ಕಟ್ಟಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆಗಳಿಂದ ಕೂಡಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡಿದೆ. ಈ ಅರಮನೆಗೆ ೧೯೫೫ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಆರ್ಟ್‌‌ ಗ್ಯಾಲರಿ ಎಂದು ಹೆಸರು ಬಂದಿತು.

ಈ ಗ್ಯಾಲರಿಯಲ್ಲಿ ತಿರುವಂಕೂರಿನ ರಾಜ ರವಿ ವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ, ಜಪಾನ್‌ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೊಘಲ್‌, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಉತ್ತಮ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹವು, ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ.

ಭೇಟಿ ಸಮಯ:

8:30 ಗಂಟೆಯಿಂದ ಸಂಜೆ 5:30 ರವರೆಗೆ ವೀಕ್ಷಣೆಗೆ ಅವಕಾಶವಿದ

ಪ್ರವೇಶ ಶುಲ್ಕ :

ದೊಡ್ಡವರಿಗೆ 20 ರೂಪಾಯಿ ಮಕ್ಕಳಿಗೆ (5 ರಿಂದ 10 ವರ್ಷ) 10 ರೂಪಾಯಿ

ಫೋಟೋ ಗ್ಯಾಲರಿ

  • ಜಗನ್ ಮೋಹನ ಅರಮನೆ ಮೈಸೂರು
    ಜಗನ್ ಮೋಹನ ಅರಮನೆ
  • ಜಗನ್ ಮೋಹನ ಅರಮನೆ ಮೈಸೂರು
    ಜಗನ್ ಮೋಹನ ಅರಮನೆ
  • ಜಗನ್ ಮೋಹನ ಅರಮನೆ ಮೈಸೂರು
    ಜಗನ್ ಮೋಹನ ಅರಮನೆ

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ನಿಲ್ದಾಣ ದಿಂದ :14.5 ಕಿಲೋ ಮೀಟರ್

ರೈಲಿನಿಂದ

ರೈಲ್ವೆ ನಿಲ್ದಾಣ ದಿಂದ :2 ಕಿಲೋ ಮೀಟರ್

ರಸ್ತೆ ಮೂಲಕ

ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2 ಕಿಲೋ ಮೀಟರ್