ಮುಕ್ತಾಯ

ತೋಟಗಾರಿಕೆ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಹೂವುಗಳ ಪ್ರದರ್ಶನ

ಕರ್ನಾಟಕ ರಾಜ್ಯವು ದೇಶದಲ್ಲೇ ಪ್ರಥಮ ಭಾರಿಗೆ ತೋಟಗಾರಿಕೆ ಇಲಾಖೆಯನ್ನು ಪ್ರಾರಂಭಿಸಿ, ಇತರೆ ರಾಜ್ಯಗಳಿಗೆ ಮಾದರಿಯಾಯಿತು. ಈ ಕಾರಣದಿಂದಾಗಿ ರಾಜ್ಯವು ತೋಟಗಾರಿಕೆ ಬೆಳೆಗಳ ಅಂದರೆ ಹಣ್ಣು, ತರಕಾರಿ, ಹೂ ಹಾಗೂ ತೋಟಗಾರಿಕಾ ಬೇಸಾಯದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿತು.

ತೋಟಗಾರಿಕೆಯು ರಾಜ್ಯದಲ್ಲಿ ಪ್ರಮುಖ ಹಾಗೂ ಗಮನಾರ್ಹ ವಿಭಾಗವಾಗಿದೆ. ಕೃಷಿ ಬೆಳೆಗಳಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆಗಳ ಬೇಸಾಯದಿಂದ ರೈತರು ಲಾಭ ಗಳಿಸಬಹುದೆಂದು ಸಾಬೀತು ಪಡಿಸಿದೆ. ತೋಟಗಾರಿಕೆ ಇಲಾಖೆಯು ನಿರ್ಧಿಷ್ಟ ಕಾರ್ಯನೀತಿಯನ್ನು ಅಳವಡಿಸಿಕೊಂಡು ತೋಟಗಾರಿಕೆಯ ಅಭಿವೃದ್ಧಿಗೆ ಈ ಕೆಳಗಿನ ಅಂಶಗಳಿಗೆ ಒತ್ತು ನೀಡಿದೆ.

ಇಲಾಖೆಯ ಉದ್ದೇಶಗಳು

 • ಹವಾಮಾನ ಆಧಾರಿತ ಆಯಾ ಸ್ಥಳಕ್ಕೆ ತಕ್ಕುದಾದ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ.
 • ಗುಣಮಟ್ಟದ ತೋಟಗಾರಿಕೆ ಸಸಿಗಳ ಉತ್ಪಾದನೆ ಹಾಗೂ ವಿತರಣೆ.
 • ಮುಂದುವರೆದ ತೋಟಗಾರಿಕಾ ತಾಂತ್ರಿಕತೆಯ ಪ್ರಸರಣೆ.
 • ಒಣಭೂಮಿ ಬೇಸಾಯವನ್ನು ಉತ್ತೇಜಿಸುವುದು.
 • ವಿಶೇಷ ನೀರಾವರಿ ತಾಂತ್ರಿಕತೆಯ ಮೂಲಕ ನೀರನ್ನು ನಿಯಮಿತವಾಗಿ ಬಳಸಲು ರೈತರಿಗೆ ನೆರವಾಗುವುದು.
 • ತೋಟಗಾರಿಕೆಯಲ್ಲಿ ಉನ್ನತ ತಂತ್ರಜ್ಞಾನದ ಅಳವಡಿಕೆ.
 • ರೈತರನ್ನು ಆರ್ಥಿಕವಾಗಿ ಬಲಗೊಳಿಸಲು ಪ್ರಯತ್ನಿಸುವುದು.
 • ಸಸ್ಯ ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗುವುದು.
 • ರೈತರಿಗೆ ಕೊಯ್ಲೋತ್ತರ ಹಾಗೂ ಮಾರುಕಟ್ಟೆಯ ವಿಷಯದಲ್ಲಿ ನೆರವಾಗುವುದು.
 • ಸಾವಯುವ ಕೃಷಿ ಪದ್ಧತಿಯನ್ನು ಉತ್ತೇಜಿಸುವುದು.
 • ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಹಾಗೂ ರಫ್ತಿಗೆ ನೆರವಾಗುವುದು.
 • ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಉನ್ನತಿಗೆ ಶ್ರಮಿಸುವುದು.
 • ರೈತರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಶೋಧನೆಗೆ ನೆರವು ನೀಡುವುದು.

 

ಜಿಲ್ಲಾ ಕಛೇರಿ:

ಉಪ ನಿರ್ದೇಶಕರು


ಕರ್ಜನ್ ಪಾರ್ಕ್
ಅರಮನೆಯ ಉತ್ತರ ದ್ವಾರ ಸಮೀಪ
ಮೈಸೂರು-570001
ದೂರವಾಣಿ ಸಂಖ್ಯೆ: 0821-2422255
ಇಮೇಲ್: ddhmysore[at]yahoo[dot]com

ಸಂಬಂಧಿತ ಅಂತರ್ಜಾಲಪುಟಗಳು
http://www.horticulture.kar.nic.in/