ಮುಕ್ತಾಯ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಮೈಸೂರು ಜಿಲ್ಲಾ ಪಂಚಾಯಿತಿ

ಮೈಸೂರು ಜಿಲ್ಲಾ ಪಂಚಾಯಿತಿ

ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರೊಂದಿಗೆ 46 ಚುನಾಯಿತ ಜಿಲ್ಲಾ ಪಂಚಾಯಿತಿಯ ಸದಸ್ಯರುಗಳು, ವಿಧಾನ ಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳಲ್ಲದೆ, ಒಟ್ಟು 70 ಚುನಾಯಿತ ಪ್ರತಿನಿಧಿಗಳು ಮೈಸೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಹಣಕಾಸು, ಸಾಮಾಜಿಕ ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ಣಯ ತೆಗೆದುಕೊಳ್ಳುವರು.

ಜಿಲ್ಲಾ ಪಂಚಾಯಿತಿಯಿಂದ ಚುನಾಯಿತರಾಗುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ 60 ತಿಂಗಳ ಅಧಿಕಾರವಧಿಯು ಇರುತ್ತದೆ.

ಅಧ್ಯಕ್ಷರ ನೇತೃತ್ವದಲ್ಲಿ ಐದು ಉಪ ಸಮಿತಿಗಳನ್ನು ರಚಿಸಲಾಗಿದೆ.

1) ಅಧ್ಯಕ್ಷರು – ಯೋಜನೆ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು

2) ಉಪಾಧ್ಯಕ್ಷರು- ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು

3) ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ

4) ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ

5) ಸಾಮಾಜಿಕ ನ್ಯಾಯ ಸಮಿತಿ

ಸರ್ಕಾರವು ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳನ್ನು ಸದರಿ ಸ್ಥಾಯಿ ಸಮಿತಿಗಳ ಮೇಲುಸ್ತುವಾರಿಯ ನಿಗಾವಹಿಸಲು ನೇಮಿಸಿದೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಈ ಕೆಳಕಂಡ ಅಧಿಕಾರಿಗಳು ಕಾರ್ಯ ನಿರ್ವಹಿಸುವರು:

a) ಉಪಕಾರ್ಯದರ್ಶಿಗಳು (ಆಡಳಿತ)

b) ಉಪಕಾರ್ಯದರ್ಶಿಗಳು (ಅಭಿವೃದ್ಧಿ)

c) ಮುಖ್ಯ ಯೋಜನಾಧಿಕಾರಿಗಳು

d) ಮುಖ್ಯ ಲೆಕ್ಕಾಧಿಕಾರಿಗಳು

e) ಯೋಜನಾ ನಿರ್ದೇಶಕರು

ಯೋಜನಾ ಶಾಖೆಯ ಕಾರ್ಯಗಳು:

ಮುಖ್ಯ ಯೋಜನಾಧಿಕಾರಿಗಳು ಯೋಜನಾ ಮತ್ತು ಕೌನ್ಸಿಲ್ ಶಾಖೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುವರು

• ಗ್ರಾಮಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಯೋಜನಾ ಕಾರ್ಯಗಳಿಗೆ ಅವಶ್ಯ ಅನುದಾನವನ್ನು ಸಂಗ್ರಹಿಸುವುದು

• ಗ್ರಾಮಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸುವುದು

• ಯೋಜನಾ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಗ್ರಾಮಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಹಂಚಿಕೆ ಮಾಡುವುದು.

• ಇಲಾಖೆಗಳಿಂದ ಯೋಜನಾ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಕುರಿತು ಉಸ್ತುವಾರಿ ಮಾಡುವುದು

• ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಪಂಚಾಯಿತಿಗಳ ವಾರ್ಷಿಕ ಅಭಿವೃದ್ಧಿ ಯೋಜನೆಗಳನ್ನು ತಯಾರಿಸುವುದು

• ಜಿಲ್ಲಾ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಕರಡು ಯೋಜನೆಯನ್ನು ತಯಾರಿಸಿ ಹಣಕಾಸು ಸಮಿತಿ ಮತ್ತು ಸಾಮಾನ್ಯ ಸಭೆಗೆ ಮಂಡಿಸುವುದು

• ಇಲಾಖೆಗಳು ಕೈಗೊಂಡಿರುವ ಎಲ್ಲಾ ಯೋಜನೆಗಳ ಬಗ್ಗೆ ಎಂ.ಎಂ.ಆರ್. ವರದಿಯನ್ನು ತಯಾರಿಸುವುದು

• ಮಾಸಿಕ ಮತ್ತು ತ್ರೈಮಾಸಿಕ ಕೆ.ಡಿ.ಪಿ. ಸಭೆಗೆ ಟಿಪ್ಪಣಿ ತಯಾರಿಸುವುದು

• ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆಗೆ ಟಿಪ್ಪಣಿ ತಯಾರಿಸುವುದು

• ಕ್ರಿಯಾ ಯೋಜನೆಯ ಮಾರ್ಗಸೂಚಿ, ಹಂಚಿಕೆ ಮತ್ತು ಭೌತಿಕ ಗುರಿಗಳನ್ನು ತಯಾರಿಸುವುದು

• ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ಹಂಚಿಕೆಯ ಯೋಜನೆಯು ಅನುಷ್ಟಾನಗೊಂಡಿರುವ ಕುರಿತು ಉಸ್ತುವಾರಿ ನೋಡಿಕೊಳ್ಳುವುದು

• ಗ್ರಾಮಪಂಚಾಯಿತಿಯ ಸಾಮಾನ್ಯ ಮಾಹಿತಿಯ ಉಸ್ತುವಾರಿಯನ್ನು ನೋಡಿಕೊಳ್ಳುವುದು

• ಜಿಲ್ಲಾ ಯೋಜನಾ ಸಮಿತಿಗೆ ಟಿಪ್ಪಣಿ ತಯಾರಿಸುವುದು

• ಜಿಲ್ಲಾಯೋಜನಾ ಸಮಿತಿಯ –ಚುನಾವಣೆ

• ಮುಖ್ಯ ಯೋಜನಾಧಿಕಾರಿಗಳು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುವುದು

ಲೆಕ್ಕ ಪತ್ರ ಶಾಖೆಯ ಕಾರ್ಯಗಳು:

ಲೆಕ್ಕ ಪತ್ರ ಶಾಖೆಯ ಮುಖ್ಯಸ್ಥರಾಗಿ ಮುಖ್ಯ ಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸುವರು.

• ಜಿಲ್ಲಾ ಪಂಚಾಯಿತಿಯ ಆಯವ್ಯಯ ತಯಾರಿಕೆ

• ಮಾಸಿಕ, ತ್ರೈಮಾಸಿ ಮತ್ತು ವಾರ್ಷಿಕ ಲೆಕ್ಕ ತಯಾರಿಸುವುದು

• ಮುಖ್ಯ ಕಾರ್ಯನಿರ್ವಾಹಕಅಧಿಕಾರಿಗಳಿಗೆ ಲೆಕ್ಕ ಶಾಖೆಯ ವಹಿವಾಟಿನ ಕುರಿತು ಸಲಹೆಗಳನ್ನು ನೀಡುವುದು

• ಇತರೆ ಇಲಾಖೆಗಳಿಂದ ಸಾಲ ವಾಪಸಾತಿ, ಸಾಲದ ಮೇಲಿನ ಬಡ್ಡಿ ಹಣಕಾಸಿನ ಇನ್ನಿತರೆ ವಿಷಯಗಳ ಉಸ್ತುವಾರಿ ನೋಡಿಕೊಳ್ಳುವುದು

• ತಾಲ್ಲೂಕು ಮತ್ತು ಗ್ರಾಮಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಆಂತರಿಕ ಲೆಕ್ಕ ಪರಿಶೀಲನೆ ನಡೆಸುವುದು

• ಜಿಲ್ಲಾ ಪಂಚಾಯತ್ ಕಾರ್ಯ ಅನುಷ್ಟಾನಗೊಳಿಸುವ ಅನುಷ್ಟಾನಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದು

• ಮುಖ್ಯ ಲೆಕ್ಕಾಧಿಕಾರಿಗಳು ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುವರು.

ಆಡಳಿತ ಶಾಖೆಯ ಕಾರ್ಯಗಳು:

• ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖೆಗಳ ಮತ್ತು ಜಿಲ್ಲಾ ಪಂಚಾಯಿತಿಯ ಆಡಳಿತ ಶಾಖೆಗೆ ಸಂಬಂಧಪಟ್ಟಂತೆ ನಿಗಾವಹಿಸುವುದು

• ಜಿಲ್ಲಾ ಪಂಚಾಯಿತಿಯ ಆಡಳಿತ ಮತ್ತು ಸಾಮಾನ್ಯ ಕಾರ್ಯಗಳ ಬಗ್ಗೆ ಮೇಲ್ವಿಚಾರಣೆ ಮಾಡುವುದು

• ಉಪಕಾರ್ಯದರ್ಶಿಗಳು ಎರಡು ಸ್ಥಾಯಿ ಸಮಿತಿಗಳ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುವುದು.

ಅಭಿವೃದ್ಧಿ ಶಾಖೆಯ ಕಾರ್ಯಗಳು:

• ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳ ಅನುಷ್ಟಾನ ಕುರಿತಂತೆ ಎಲ್ಲಾ ರೀತಿಯ ವ್ಯವಹಾರಗಳನ್ನು ನಡೆಸುವುದು ಮತ್ತು ಈ ಬಗ್ಗೆ ವರದಿಯನ್ನು ಸರ್ಕಾರಕ್ಕೆ ರವಾನಿಸುವುದು.

• ಗ್ರಾಮೀಣ ಕುಡಿಯುವ ನೀರು ಸರಬರಾಜು ಅನುಷ್ಠಾನ

• ಕೇಂದ್ರದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಟಾನ

ಯೋಜನಾ ನಿರ್ದೇಶಕರ ಶಾಖೆಯ ಕಾರ್ಯಗಳು:

• ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗ, ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆ, ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ ತರಬೇತಿ ಸ್ವರ್ಣಜಯಂತಿ ಗ್ರಾಮಸ್ವರಾಜ್ ಯೋಜನೆ, ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆ, ಸ್ವಚ್ಛಗ್ರಾಮ ಮತ್ತು ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ.