ಮುಕ್ತಾಯ

ಮೀನುಗಾರಿಕೆ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

Department'ಮತ್ಸ್ಯ ದರ್ಶಿನಿ

ಮೀನು ಉತ್ಪಾದನೆ ಹೆಚ್ಚಿಸುವುದು, ಒಳನಾಡು, ಕರಾವಳಿ ಮತ್ತು ಹಿನ್ನೀರು ಮೀನುಗಾರಿಕೆ ಸಂಪನ್ಮೂಲಗಳ ಸರ್ವತೋಮುಖ ಮತ್ತು ಸುಸ್ಥಿರ ಅಭಿವೃದ್ದಿಗಾಗಿ ಮೀನುಗಾರಿಕೆ ಇಲಾಖೆಯನ್ನು1957 ಇಸವಿಯಲ್ಲಿ, ರಾಜ್ಯದ ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಕರ್ನಾಟಕದಲ್ಲಿಸುಮಾರು 5.93 ಲಕ್ಷಹೆಕ್ಟೇರ್ಗಳಷ್ಟುಒಳನಾಡುಜಲಸಂಪನ್ಮೂಲ, 8000ಹೆಕ್ಟೇರ್ಹಿನ್ನೀರುಪ್ರದೇಶಮತ್ತು27,000 ಚದರಕಿ.ಮೀ. ಭೂಖಂಡಪ್ರದೇಶವನ್ನುಹೊಂದಿದ 320 ಕಿ.ಮೀಉದ್ದದಕರಾವಳಿಪ್ರದೇಶಇರುತ್ತದೆ. ಆದ್ದರಿಂದ ಮಾನವನ ಆಹಾರದಲ್ಲಿಮೀನು ಕಡಿಮೆ ಬೆಲೆಯ ಪ್ರೋಟೀನ್ಮೂಲವಾಗಿರುವುದರಿಂದ, ಮೀನು ಉತ್ಪಾದನೆ ಹೆಚ್ಚಿನ ಮಹತ್ವ ಪಡೆದಿದೆ.

ರಾಜ್ಯದ ಮೀನು ಉತ್ಪಾದನೆ ಎಂಭತ್ತರ ದಶಕದ ಆರಂಭದಲ್ಲಿ ಸುಮಾರು 2 ಲಕ್ಷಟನ್ಗಳಷ್ಟಿದ್ದು, ಅದು ತೊಂಭತ್ತರ ದಶಕದ ಮಧ್ಯದಲ್ಲಿಸುಮಾರು 3 ಲಕ್ಷಟನ್ಗಳಿಗೆ ಏರಿತು. ಕಳೆದ ಐದು ವರ್ಷಗಳ ಅವಧಿಯ ಸರಾಸರಿ ಮೀನು ಉತ್ಪಾದನೆ ಸುಮಾರು 5.65 ಲಕ್ಷಟನ್ಗಳಿಗೆಏರಿದೆ. ಇದರಲ್ಲಿ ಕರಾವಳಿಯ ಕೊಡುಗೆ ಶೇ.66 ಇದ್ದರೆ ಒಳನಾಡಿನ ಕೊಡುಗೆ ಶೇ.34ರಷ್ಟಿದೆ. 2013-14 ನೇ ಸಾಲಿನ ದೇಶದ ಒಟ್ಟು ಮೀನು ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಶೇ.5.86 ರಷ್ಟಿದ್ದು, ಒಳನಾಡು ಮೀನು ಉತ್ಪಾದನೆಯಲ್ಲಿ 7ನೇ ಸ್ಥಾನ ಹಾಗೂ ಕರಾವಳಿಯಲ್ಲಿ 6ನೇ ಸ್ಥಾನಹೊಂದಿದೆ. ರಾಜ್ಯದ ಪ್ರಸ್ತುತ ತಲಾ ಮೀನು ಲಭ್ಯತೆ 6.8 ಕೆ.ಜಿಯಷ್ಟಿದೆ. ರಾಜ್ಯದ ಒಟ್ಟು ಅಂತರಿಕ ಉತ್ಪಾದನೆಗೆ ಮೀನುಗಾರಿಕೆ ವಲಯದ ಕೊಡುಗೆ 1993-94 ರಲ್ಲಿ ರೂ.16.316 ಲಕ್ಷಗಳಷ್ಟಿದ್ದು, 2012-13 ರಲ್ಲಿ ರೂ.2,86,273ಲಕ್ಷಗಳಿಗೆ ಹೆಚ್ಚಿದೆ.

ಮೀನುಗಾರಿಕೆಯು ವಿದೇಶಿವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಟಿಯ ಮೂಲವಾಗಿರುವುದರಿಂದ ಮತ್ತು ದೇಶದಅರ್ಥಿಕಪ್ರಗತಿಯಲ್ಲಿ ಪ್ರಮುಖಸ್ಥಾನವನ್ನು ಹೊಂದುವ ಉದ್ದೇಶದೊಂದಿಗೆ ಮೀನುಹಿಡುವಳಿ, ಇಳಿದಾಣ, ಸಂಸ್ಕರಣೆ, ಜೋಪಾಸಣೆ ಮತ್ತು ಮಾರಾಟಕ್ಕೆ ಮೂಲಭೂತ ಸೌಲಭ್ಯಗಳ ಅಭಿವೃದ್ದಿಪಡಿಸುವುದು, ಕೈಗಾರಿಕೆ ಉದ್ದಿಮೆಯ ಸ್ವರೂಪವನ್ನು ಹೊಂದಿದೆ. ಮೀನುಗಾರರಆರ್ಥಿಕಸಾಮಾಜಿಕಅಭಿವೃದ್ದಿಪಡಿಸುವುದು, ಸಾರ್ವಜನಿಕರವಿಶೇಷವಾಗಿಮೀನುಗಾರರಕಲ್ಯಾಣಕ್ಕಾಗಿಹಲವಾರುಯೋಜನೆಗಳನ್ನುಅನುಷ್ಟಾನಗೊಳಿಸಲಾಗುತ್ತಿದೆ.

ವಿನಾಶದ ಅಂಚಿನಲ್ಲಿರುವ ಹಲವುಮೀನುತಳಿಗಳನ್ನು ಸಂರಕ್ಷಣೆ ಮಾಡುವಸಲುವಾಗಿ, ಮೀನುತಳಿಗಳನ್ನು ಅಭಿವೃದ್ದಿಪಡಿಸಿ, ನೈಸರ್ಗಿಕ ಜಲಸಂಪನ್ಮೂಲಗಳನ್ನು ದಾಸ್ತಾನಿಸಿ ಅಭಿವೃದ್ದಿ ಪಡಿಸುವುದು ಹಾಗೂ ಸಂರಕ್ಷಿಸುವುದು.

ಮೀನುಗಾರರಿಗೆ ಆರ್ಥಿಕಲಾಭದ ದೃಷ್ಟಿಯಿಂದ ಹೊಸಹೊಸ ತಳಿಗಳನ್ನು ಅಭಿವೃದ್ದಿ ಪಡಿಸಲು ಸಂಶೋಧನೆಗೆ ಹೆಚ್ಚಿನ ಪ್ರೊತ್ಸಾಹ ನೀಡುವುದು ಮತ್ತು ರೈತರಿಗೆ ತಾಂತ್ರಿಕ ಮತ್ತು ವೈಜ್ಞಾನಿಕ ಮಾಹಿತಿ ನೀಡುವುದು.

 

</ br>

ಜಿಲ್ಲಾ ಕಛೇರಿ:

ಹಿರಿಯ ಸಹಾಯಕ ನಿರ್ದೇಶಕರು

</ br>
ಮೀನುಗಾರಿಕೆ ಇಲಾಖೆ</ br>

ಮಾಧವ ಹಾಸ್ಟೆಲ್ ಎದುರು</ br>

ಪಶುವೈದ್ಯ ಆಸ್ಪತ್ರೆ ಸಂಯುಕ್ತ ,ಕೆ.ಆರ್.ವಣಮ್</ br>

ಮೈಸೂರು-570008</ br>

ದೂರವಾಣಿ ಸಂಖ್ಯೆ: 0821-2483533</ br>