ಮುಕ್ತಾಯ

ಸಮಾಜ ಕಲ್ಯಾಣ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ

ಸಮಾಜ ಕಲ್ಯಾಣ ಇಲಾಖೆಯು ಸರ್ಕಾರದ ಒಂದು ಮುಖ್ಯ ಇಲಾಖೆಯಾಗಿರುತ್ತದೆ. ರಾಜ್ಯದಲ್ಲಿ 1956ರಲ್ಲಿ ಸ್ಥಾಪನೆಯಾಗಿರುತ್ತದೆ. ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್ ವತಿಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಪ. ಜಾತಿಯವರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) 1989ರ ತಿದ್ದುಪಡಿ ಕಾಯ್ದೆ 2015 ರನ್ವಯ ನೊಂದವರಿಗೆ ಪರಿಹಾರಧನ ನೀಡಲಾಗುತ್ತಿದೆ.

2011ರ ಜನಗಣತಿ ಪ್ರಕಾರ, ಮೈಸೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 5,36,643 ಜನಸಂಖ್ಯೆಯನ್ನು ಹೊಂದಿದೆ.

ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನ ಆಯವ್ಯಯದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮದಡಿ ರೂ.2847.89 ಲಕ್ಷಗಳು ಬಿಡುಗಡೆಯಾಗಿರುತ್ತದೆ. ನಿಗದಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರೂ.3880.21 ಲಕ್ಷಗಳನ್ನು ನಿಯಮಾನುಸಾರ ಖರ್ಚನ್ನು ಭರಿಸಲಾಗಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮದಡಿ ವಿಶೇಷ ಘಟಕ ಯೋಜನೆಗೆ ರೂ.180.00 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ರೂ.180.00 ಲಕ್ಷಗಳನ್ನು ನಿಗದಿತ ಕಾರ್ಯಕ್ರಮಗಳಿಗೆ ನಿಯಮಾನುಸಾರ ಖರ್ಚನ್ನು ಭರಿಸಲಾಗಿದೆ.

ಇಲಾಖೆಯ ಕಾರ್ಯಕ್ರಮಗಳಲ್ಲಿ ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮಗಳು ಆದ್ಯತೆಯ ಕಾರ್ಯಕ್ರಮಗಳಾಗಿದ್ದು, ಪರಿಶಿಷ್ಟ ಜಾತಿ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆಗಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮಂಜೂರಾತಿ, ಬಹುಮಾನದ ಹಣ, ಕಾನೂನು ಪದವೀಧರರಿಗೆ ಶಿಷ್ಯವೇತನ, ಅಂತರ್ ಜಾತಿ ವಿಹಾಹಿತ ದಂಪತಿಗಳಿಗೆ ಪ್ರೋತ್ಸಾಹಧನ, ಸರಳ ವಿವಾಹ, ಸಮುದಾಯ ಭವನಗಳ ನಿರ್ಮಾಣ, ಪ.ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳು ಇನ್ನಿತರ ವಿವಿಧ ಹಂತದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

</ br>

ಜಿಲ್ಲಾ ಕಛೇರಿ:

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ

</ br>
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ</ br>

Dr. ಬಾಬು ಜಗಜೀವನ ರಾಮ್ ಭವನ</ br>

ನಾರಾಯಣ್ ಸ್ವಾಮಿ ಬ್ಲಾಕ್</ br>

ಪಡುವಾರಹಳ್ಳಿ ಪೂರ್ವ</ br>

ಮೈಸೂರು-570012</ br>

ದೂರವಾಣಿ ಸಂಖ್ಯೆ: 0821-2344661</ br>

 

ಸಂಬಂಧಿತ ಅಂತರ್ಜಾಲಪುಟಗಳು </ br>

https://sw.kar.nic.in/