ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
ಇಲಾಖೆ ಸ್ಥಾಪನೆಯ ಘನೋದ್ದೇಶ
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು 1945 ರಲ್ಲಿ ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿತು. ರಾಜ್ಯದ ಜಾನುವಾರು ಸಂಪತ್ತಿಗೆ ಅರೋಗ್ಯ ರಕ್ಷಣೆ ನೀಡುವ ಹೊಣೆಗಾರಿಕೆಯ ಜೊತೆಗೆ ಜಾನುವಾರು ಅಭಿವೃದ್ಧಿ ಚಟುವಟಿಕೆ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಜಾನುವಾರು ಗಣತಿ ಮುಂತಾದ ಕಾರ್ಯಾಕ್ರಮಗಳನ್ನು ಇಲಾಖೆಯು ತನ್ನ ವಿವಿಧ ಸ್ತರದ ಪಶುವೈದ್ಯ ಸಂಸ್ಥೆಗಳ ಜಾಲದ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಇಲಾಖೆಯ ಉದ್ದೇಶಗಳು
- ರೋಗಗ್ರಸ್ತ ಪ್ರಾಣಿಗಳ ಚಿಕಿತ್ಸೆಗಾಗಿ ಪಶುವೈದ್ಯ ಸೇವೆಗಳನ್ನು ಒದಗಿಸುವುದು ಹಾಗೂ ಪ್ರಾಣಿರೋಗಗಳ ತಡೆಗಟ್ಟುವಿಕೆ, ನಿಯಂತ್ರಿಸುವಿಕೆ ಮತ್ತು ನಿರ್ಮೂಲನೆ ಮಾಡುವಿಕೆ.
- ಗುಣಮಟ್ಟ ನಿಯಂತ್ರಣದೊಂದಿಗೆ ಮೇವು ಹಾಗೂ ಪಶುಆಹಾರ ಅಭಿವೃದ್ಧಿಗೊಳಿಸುವುದು.
- ದನಗಳು, ಎಮ್ಮೆಗಳು, ಮೆಲುಕು ಹಾಕುವ ಸಣ್ಣ ಪ್ರಾಣಿಗಳು, ಕೋಳಿ ಹಾಗೂ ಹಂದಿ ಸಾಕಾಣಿಕೆ ಅಭಿವೃದ್ಧಿಗೊಳಿಸುವುದು.
- ಗುಣಮಟ್ಟ ಭರವಸೆಯೊಂದಿಗೆ ಹಾಲು, ಮಾಂಸ ಮತ್ತು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸುವುದು.
- ಜಾನುವಾರು ಮತ್ತು ಕೋಳಿ ಸಾಕುವ ರೈತರು ಹಾಗೂ ಉದ್ಯಮಶೀಲರಿಗೆ ಆರ್ಥಿಕ ನೆರವು ಒದಗಿಸುವುದು.
- ಜಾನುವಾರು ಉತ್ಪಾದನಾ ತಂತ್ರಜ್ಞಾನವನ್ನು ಸುಧಾರಣೆಗೊಳಿಸುವುದು.
- ರಾಜ್ಯದಲ್ಲಿ ಆರೋಗ್ಯಕರ ಉತ್ಪಾದನಾ ವ್ಯವಸ್ಥೆ, ಹಾಲು, ಮಾಂಸ ಮತ್ತು ಮೊಟ್ಟೆಗಳ ಮಾರುಕಟ್ಟೆಯನ್ನು ಪ್ರೋತ್ಸಾಹಿಸುವುದು.
- ಹಾಲು ಮತ್ತು ಮೊಟ್ಟೆಗಳಿಗೆ ಗುಣಮಟ್ಟ ನಿಯಂತ್ರಣ / ಪ್ರಮಾಣೀಕರಣ ಘಟಕಗಳನ್ನು ಸ್ಥಾಪಿಸುವುದು.
- ಪ್ರಾಣಿ, ಪಶುವೈದ್ಯಕೀಯ ಮತ್ತು ಹೈನುಗಾರಿಕೆ ವಿಜ್ಞಾನಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವುದು.
- ವಿಸ್ತರಣಾ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವುದು.
- ಅನುವಂಶೀಯ ನಕ್ಷೆಯೊಂದಿಗೆ ದೇಶೀಯ ತಳಿಗಳನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು.
- ಹಿಂದುಳಿದ ಪ್ರದೇಶಗಳನ್ನು ಕೇಂದ್ರೀಕರಿಸಿಕೊಂಡು ಪಶುವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವುದು / ಬಲಪಡಿಸುವುದು.
- ಪಶುಸಂಗೋಪನಾ ಚಟುವಟಿಕೆಗಳ ಮೂಲಕ ಪರಿಶಿಷ್ಟ ಜಾತಿ / ಪಂಗಡಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
</ br>
ಜಿಲ್ಲಾ ಕಛೇರಿ:
ನಿರ್ದೇಶಕರು
</ br>
ನಗರ ಪಶುವೈದ್ಯ ಆಸ್ಪತ್ರೆ </ br>
ದನ್ವಂತ್ರಿ ರಸ್ತೆ</ br>
ಮೈಸೂರು-570001</ br>
ದೂರವಾಣಿ ಸಂಖ್ಯೆ: 0821-2420606</ br>
ಸಂಬಂಧಿತ ಅಂತರ್ಜಾಲಪುಟಗಳು </ br>