ಮುಕ್ತಾಯ

ಸಹಕಾರ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ರೈತ ಸಮುದಾಯ ಹಾಗೂ ದುರ್ಬಲ ಜನಾಂಗದವರು ಮಧ್ಯವರ್ತಿಗಳು, ದಳ್ಳಾಳಿಗಳು, ಲೇವಾದೇವಿದಾರರು ಇತ್ಯಾದಿಯವರಿಂದ ಶೋಷಣೆಗೆ ಒಳಗಾಗಿದ್ದ ಸಂದರ್ಭದಲ್ಲಿ ಸಹಕಾರ ಒಂದು ಸಹಾಯಕನ ರೀತಿಯಲ್ಲಿ ಹುಟ್ಟಿಕೊಂಡಂತಹ ವ್ಯವಸ್ಥೆಯಾಗಿದೆ. 1905ರಲ್ಲಿ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಥಮ ಸಹಕಾರ ಸಂಘವನ್ನು ಗದಗ ಜಿಲ್ಲೆಯ ಕಣಗಿನಹಾಳ್ ಎಂಬಲ್ಲಿ ಪ್ರಾರಂಭವಾಗುವುದರ ಮೂಲಕ ರಾಜ್ಯದಲ್ಲಿ ಸಹಕಾರ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿರುತ್ತದೆ. ಇದಲ್ಲದೆ ರೈತನಿಗೆ ಅವಶ್ಯವಿರುವ ರಸಗೊಬ್ಬರ ಬಿತ್ತನೆ ಬೀಜ, ಕೃಷಿ ಉಪಕರಣಗಳು ಹಾಗು ಗೃಹೋಪಯೋಗಿ ವಸ್ತುಗಳನ್ನು ಸಹ ಗ್ರಾಮೀಣ ಭಾಗದ ಸಹಕಾರ ಸಂಘಗಳಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ರೈತ ಬೆಳೆಯುವ ಬೆಳೆಗಳನ್ನು ಖರೀದಿಸಿ ಉತ್ತಮ ಮಾರುಕಟ್ಟೆ ಒದಗಿಸುವ ಕೆಲಸವನ್ನು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು, ರೈತರು ಬೆಳೆದ ಕಬ್ಬು ಖರೀದಿಸಿ ಸಕ್ಕರೆ ಮಾಡುವ ಸಹಕಾರ ಸಕ್ಕರೆ ಕಾರ್ಖಾನೆಗಳು, ಬುಡಕಟ್ಟು ಜನಾಂಗದವರ ಯೋಗಕ್ಷೇಮಕ್ಕಾಗಿ ಲ್ಯಾಂಪ್ಸ್ ಸಹಕಾರ ಸಂಘಗಳು (ಗಿರಿಜನರ ದೊಡ್ಡಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘಗಳು) ಹೀಗೆ ವಿವಿಧ ಮಾದರಿಯ ಸಹಕಾರ ಸಂಘಗಳ ಮೂಲಕ ರೈತ ಸಮುದಾಯಕ್ಕೆ ಇಲಾಖೆಯು ಸೇವೆ ಸಲ್ಲಿಸುವ ಉದ್ದೇಶವು ಹೊಂದಿದೆ. ಇದಲ್ಲದೇ ಪಟ್ಟಣ ಪ್ರದೇಶದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು, ಪತ್ತಿನ ಸಹಕಾರ ಸಂಘಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು, ಮಹಿಳಾ ಸಹಕಾರ ಸಂಘಗಳ ಮೂಲಕ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರಿಗೂ ಅನುಕೂಲವಾಗುವಂತೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಇವುಗಳು ಜಿಲ್ಲೆಯ ಸಹಕಾರಿ ವ್ಯವಸ್ಥೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಸರ್ವಜನಾಂಗದ ಶ್ರೇಯೋಭಿವೃದ್ಧಿಗೆ ಇಲಾಖೆಯಿಂದ ಅನೇಕ ಉಪಯೋಗಗಳು ದೊರೆಯುತ್ತಿವೆ. 2007-08ನೇ ಸಾಲಿನಲ್ಲಿ ಸಹಕಾರ ಶತಮಾನೋತ್ಸವವನ್ನು ಮೈಸೂರಿನಲ್ಲಿ ಆಚರಿಸುವುದರ ಮೂಲಕ ಸಹಕಾರ ರಂಗದಲ್ಲಿ ತನ್ನ ಯಶಸ್ಸನ್ನು ಸಾಧಿಸಿ ತೋರಿಸಿದೆ.

 

ಜಿಲ್ಲಾ ಕಛೇರಿ:

ಡೆಪ್ಯೂಟಿ ರಿಜಿಸ್ಟ್ರಾರ್


ಸಹಕಾರ ಇಲಾಖೆ
ಸಾರ್ವಜನಿಕ ಕಛೇರಿ ಕಟ್ಟಡ
ಹೊಸ ಸಯಾಜಿ ರಾವ ರಸ್ತೆ
ಮೈಸೂರು-570024
ದೂರವಾಣಿ ಸಂಖ್ಯೆ: 0821-2521956
ಇಮೇಲ್: drcs-mysore-ka[at]nic[dot]in

ಸಂಬಂಧಿತ ಅಂತರ್ಜಾಲಪುಟಗಳು
http://sahakara.kar.gov.in/