ಮುಕ್ತಾಯ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಪರಿಶಿಷ್ಟ ಪಂಗಡ ಜನರ ಗುಡಿಸಲು ವಾಸ

ಸಮಾಜದಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಪರಿಶಿಷ್ಟ ಪಂಗಡದ ಜನರ ಮತ್ತು ಸಾಮಾನ್ಯ ವರ್ಗದ ಜನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು ಹಾಗೂ ಪರಿಶಿಷ್ಟ ಪಂಗಡದ ಜನರು ಗೌರವಾನ್ವಿತ ಮತ್ತು ಹಿರಿಮೆಯ ಜೀವನವನ್ನು ಮಾಡುವಂತೆ ಅನುಕೂಲ ಕಲ್ಪಿಸಿಕೊಡುವ ದೂರದೃಷ್ಠಿ ಹಾಗೂ ಸಾಮಾಜಿಕವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಪರಿಶಿಷ್ಟ ಪಂಗಡದ ಜನರನ್ನು ಶಸಕ್ತಗೊಳಿಸಲು ಸೂಕ್ತ ಶಾಸನಾತ್ಮಕ, ಆಡಳಿತಾತ್ಮಕ ಮತ್ತು ಸಾಮಾಜಿಕ, ಆರ್ಥಿಕ ಮಧ್ಯಸ್ಥಿಕೆಗಳ ಮೂಲಕ ಉತ್ತಮ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮೂಲಕ ಆದಾಯ ಗಳಿಸುವಂತಹ ಚಟುವಟಿಕೆಗಳನ್ನು ರೂಪಿಸಿ, ಸಾಮಾಜಿಕವಾಗಿ ನ್ಯಾಯ ಸಮ್ಮತವಾದ ಸಮಾನ ಪರಿಸರ ಕಲ್ಪಿಸಿಕೊಡುವ ಘನೋದ್ಧೇಶದಿಂದ ರಾಜ್ಯದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಲಾಗಿದೆ.

ಇಲಾಖೆಯ ಉದ್ದೇಶಗಳು

  • ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಸುಧಾರಿತ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವ ಮೂಲಕ ಪರಿಶಿಷ್ಟ ಪಂಗಡದ ಜನರ ಶಿಕ್ಷಣಕ್ಕೆ ಉತ್ತೇಜನ ನೀಡುವುದು.
  • ಮೂಲನಿವಾಸಿ ಜನಾಂಗದವರ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಯಕ್ರಮಗಳನ್ನು ರೂಪಿಸುವುದು.
  • ಕೌಶಲ್ಯಾಭಿವೃದ್ಧಿ ಮೂಲಕ ಸಾಮರ್ಥ್ಯವನ್ನು ಬಲಪಡಿಸುವಂತಹ ಕಸುಬುಗಳಲ್ಲಿ ತರಬೇತಿ ನೀಡಿ ಪರಿಶಿಷ್ಟ ಪಂಗಡದ ಜನರು ಆರ್ಥಿಕವಾಗಿ ಸಬಲೀಕರಣವನ್ನು ಉತ್ತೇಜಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು.
  • ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗದ ಜನರ ನಡುವೆ ಇರುವ ತಾರತಮ್ಯ ನಿರ್ಮೂಲನೆ ಮಾಡುವುದು ಹಾಗೂ ಶೋಷಣೆಯನ್ನು ತಡೆಗಟ್ಟುವುದು.
  • ಪರಿಶಿಷ್ಟ ಪಂಗಡದ ವಾಸ ಸ್ಥಳಗಳಲ್ಲಿ ಸಮುದಾಯಕ್ಕೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗೌರವಯುತ ಜೀವನ ನಡೆಸುವುದನ್ನು ಖಚಿತ ಪಡಿಸುವುದು.
  • ಸಮಗ್ರ ಸಾಮಾಜಿಕ ಅರಿವು ಮೂಡಿಸಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಕಾಣಲು ಜನರಲ್ಲಿನ ನಡವಳಿಕೆಯಲ್ಲಿ ಬದಲಾವಣೆ ತರುವುದು.
  • ಉತ್ತಮ ಮತ್ತು ಪಾರದರ್ಶಕ ಆಡಳಿತ ನೀಡುವುದು.

 

</ br>

ಜಿಲ್ಲಾ ಕಛೇರಿ:

ಯೋಜನಾ ಸಮನ್ವಯಾಧಿಕಾರಿ

</ br> Dr. ಬಾಬು ಜಗಜೀವನ ರಾಮ್ ಭವನ</ br>

ನಾರಾಯಣ್ ಸ್ವಾಮಿ ಬ್ಲಾಕ್</ br>

ಪಡುವಾರಹಳ್ಳಿ ಪೂರ್ವ</ br>

ಮೈಸೂರು-570012</ br>

ದೂರವಾಣಿ ಸಂಖ್ಯೆ: 0821-2427140</ br>