ಸೇವಾ ಸಿಂಧು
ಸೇವಾ ಸಿಂಧು : ಬೆರಳ ತುದಿಯಲ್ಲಿ ನಾಗರಿಕ ಸೇವೆಗಳು
ಸೇವಾ ಸಿಂಧು (ಇ-ಜಿಲ್ಲೆ) ಯೋಜನೆಯು ರಾಷ್ಟ್ರೀಯ ಇ-ಆಡಳಿತ ಯೋಜನೆಯ (NeGP) 31 ಮಿಷನ್ ಮೋಡ್ ಯೋಜನೆಗಳ ಒಂದು ಭಾಗವಾಗಿದೆ. ಭಾರತ ಸರ್ಕಾರದ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸಲಿದ್ದು, ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರ ಗೊತ್ತುಪಡಿಸುವ ಏಜೆನ್ಸಿಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವುವು. ಜಿಲ್ಲಾ ಕೇಂದ್ರಗಳಲ್ಲಿರುವ ವಿವಿಧ ಇಲಾಖೆಗಳ ಹಲವಾರು ಸೇವೆಗಳನ್ನು ನಾಗರೀಕರಿಗೆ ತಡೆರಹಿತವಾಗಿ ನೀಡಲು ಅನುವಾಗಲು ಮತ್ತು ಇಲಾಖೆಗಳ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೇವಾ ಸಿಂಧು ಯೋಜನೆಯನ್ನು ಪರಿಕಲ್ಪಿಸಲಾಗಿದೆ.
ಇ-ಆಡಳಿತ ಇಲಾಖೆಯ ಇಡಿಸಿಎಸ್ ನಿರ್ದೇಶನಾಲಯವು ಇ-ಜಿಲ್ಲೆ ಮಿಷನ್ ಮೋಡ್ ಯೋಜನೆಯನ್ನು ರಾಜ್ಯವ್ಯಾಪಿ ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾಗಿದೆ. ಇಲ್ಲಿಯವರೆವಿಗೆ ವಿವಿಧ ಇಲಾಖೆಗಳ 346 ನಾಗರೀಕ ಸೇವೆಗಳನ್ನು ಸೇವಾ ಸಿಂಧು ಯೋಜನೆಯಡಿ ಸಂಯೋಜಿಸಲು ಗುರುತಿಸಲಾಗಿದೆ. ಈ ಪೈಕಿ 71 ಸೇವೆಗಳು ರಾಷ್ಟೀಯ ಮಟ್ಟದ ಕಡ್ಡಾಯ ಸೇವೆಗಳಾಗಿದ್ದು, ಉಳಿದ 225 ಸೇವೆಗಳನ್ನು ರಾಜ್ಯವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಂದಾಯ ಇಲಾಖೆಯ 29 ಪ್ರಮಾಣ ಪತ್ರಗಳ ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದೊಂದಿಗೆ ಸಂಯೋಜಿಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಇಲ್ಲಿಯವರೆವಿಗೆ 1,12,000 ವ್ಯವಹಾರಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದ ಮೂಲಕ ಯಶಸ್ವಿಯಾಗಿ ಮಾಡಲಾಗಿದ್ದು, 1.00 ಲಕ್ಷಕ್ಕೂ ಅಧಿಕ ಪ್ರಮಾಣ ಪತ್ರಗಳನ್ನು ನಾಗರಿಕರಿಗೆ ವಿತರಿಸಲಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಔಷದ ನಿಯಂತ್ರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯೋಜನಾ ಇಲಾಖೆಯ 18 ಹೆಚ್ಚುವರಿ ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣಕ್ಕೆ ಸಂಯೋಜಿಸಲಾಗಿದೆ.
ವೆಬ್ ಸೈಟ್/ ಪೋರ್ಟಲ್ ವಿಳಾಸ:http://sevasindhu.karnataka.gov.in/
ಭೇಟಿ: http://www.sevasindhu.karnataka.gov.in
ಜಿಲ್ಲಾಧಿಕಾರಿಯವರ ಕಛೇರಿ
ಸ್ಥಳ : ಜಿಲ್ಲಾಧಿಕಾರಿಯವರ ಕಛೇರಿ | ನಗರ : ಮೈಸೂರು | ಪಿನ್ ಕೋಡ್ : 570005