ಮುಕ್ತಾಯ

ಅಂಬಾವಿಲಾಸ ಅರಮನೆ

ನಿರ್ದೇಶನ

1897ರಲ್ಲಿ ಕಟ್ಟಲಾರಂಭಿಸಿ 1912ರಲ್ಲಿ ಮುಕ್ತಾಯಗೊಳಿಸಲಾದ ಈ ಅರಮನೆಗೆ ಅಂಬಾವಿಲಾಸ ಅರಮನೆ ಎಂದೂ ಹೆಸರು. ಈ ಅರಮನೆಯು ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿದ್ದು ಇಂಡೋ ಸಾರ್ಸೆನಿಕ್‌ ಶೈಲಿಯಲ್ಲಿದೆ.ಅರಮನೆಯ ಹೊರಭಿತ್ತಿಗಳಲ್ಲಿ ಹಕ್ಕಿಗಳು, ಪ್ರಾಣಿಗಳು ಹಾಗೂ ಇತರ ಕೆತ್ತನೆ ಇದೆ. ಒಳಭಾಗದ ಮುಚ್ಚಿಗೆಯಲ್ಲಿ ಕೆತ್ತನೆ ಇದೆ. ಅರಮನೆಯ ಪ್ರವೇಶವಾದಂತೆ ಬೊಂಬೆ ತೊಟ್ಟಿಲು ಮೊದಲು ಕಾಣಸಿಗುತ್ತದೆ. ಇಲ್ಲಿ 19 ಮತ್ತು 20ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಪೂರ್ವವಾದ ಕೆತ್ತನೆಯಿರುವ ಕಂಬಗಳಿಂದ ಕೂಡಿದ ವಿಶಾಲವಾದ ಹಾಲ್‌ಗಳು, ದರ್ಬಾರ್‌ಹಾಲ್‌, ಕಲ್ಯಾಣ ಮಂಟಪಗಳು, ಆಯುಧಾಗಾರಗಳಿವೆ.ಭಾನುವಾರದಂದು, ಸಾರ್ವಜನಿಕ ರಜಾದಿನಗಳು ಮತ್ತು ದಸರಾ ಆಚರಣೆಗಳಲ್ಲಿ ಅರಮನೆಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತದೆ ಮತ್ತು ಇದಕ್ಕಾಗಿ 97,000 ಎಲೆಕ್ಟ್ರಿಕ್ ಬಲ್ಬಗಳನ್ನು ಬೆಳಗಿಸಲು ಬಳಸಲಾಗುತ್ತದೆ.

ಈ ಅರಮನೆಯು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ. ಮುಖ್ಯ ದ್ವಾರವನ್ನು ಪೂರ್ವಕ್ಕೆ “ಜಯಾ ಮಾರ್ಥಂಡ” ಎಂದು ಕರೆಯಲಾಗುತ್ತದೆ, ಉತ್ತರದಲ್ಲಿ “ಜಯರಾಮಾ”, ದಕ್ಷಿಣಕ್ಕೆ “ಬಲರಾಮ” ಮತ್ತು “ವರಾಹ” ಪಶ್ಚಿಮಕ್ಕೆ.

ಭೇಟಿ ಸಮಯ, ಪ್ರವೇಶ ಶುಲ್ಕ ಮತ್ತು ಸಂಪರ್ಕ

 ಪ್ರತಿ ದಿನ, ಬೆಳಿಗ್ಗೆ 10 ರಿಂದ ಸಂಜೆ 5:30 ರವೆರೆಗೆ.

ಪ್ರವೇಶ ಶುಲ್ಕ :

ದೊಡ್ಡವರಿಗೆ : 50. ರೂ
7 ವರ್ಷದ ಕಡಿಮೆ ವಯಸ್ಸಿನ ಮಕ್ಕಳಿಗೆ : ಉಚಿತ
7 ರಿಂದ 12 ವರ್ಷ ವಯಸ್ಸಿನ ಮಕ್ಕಳು: 30 ರೂ.

ಸಂಪರ್ಕಿಸಲು

ಫೋನ್ : 0821-2421 051
ವೆಬ್ ಸೈಟ್ :  http://mysorepalace.karnataka.gov.in/

ಅರಮನೆಯಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಪ್ರವಾಸಿಗರಿಗೆ ಅನುಮತಿ ಇರುವುದ್ದಿಲ್ಲ.

ಆಡಿಯೋ ಕಿಟ್ ಗಳು ಈ ಕೆಳಗಿನ ಭಾಷೆಗಳಲ್ಲಿ ದೊರೆಯುತ್ತವೆ :

ಆಂಗ್ಲ
ಹಿಂದಿ
ಕನ್ನಡ
ಜರ್ಮನ್
ಇಟಾಲಿಯನ್
ಜಪಾನೀ
ಫ್ರೆಂಚ್

ಫೋಟೋ ಗ್ಯಾಲರಿ

  • ಮೈಸೂರು  ಅರಮನೆ
    ಅಂಬಾ ವಿಲಾಸ(ಮೈಸೂರು ಅರಮನೆ)
  • ಅಂಬಾ ವಿಲಾಸ - ಮೈಸೂರು ಅರಮನೆ, ಮೈಸೂರು
    ಅಂಬಾ ವಿಲಾಸ - ಮೈಸೂರು ಅರಮನೆ, ಮೈಸೂರು
  • ಮೈಸೂರು ಅರಮನೆ, ಮೈಸೂರು
    ಅಂಬಾ ವಿಲಾಸ - ಮೈಸೂರು ಅರಮನೆ ಪ್ರವೇಶ ದ್ವಾರ

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ನಿಲ್ದಾಣ ದಿಂದ :10.5 ಕಿಲೋ ಮೀಟರ್

ರೈಲಿನಿಂದ

ರೈಲ್ವೆ ನಿಲ್ದಾಣ ದಿಂದ : 1.9 ಕಿಲೋ ಮೀಟರ್

ರಸ್ತೆ ಮೂಲಕ

ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :1 ಕಿಲೋ ಮೀಟರ್